ಸುದ್ದಿ ಸಂಕ್ಷಿಪ್ತ

ಚೆಸ್ ಪಂದ್ಯಾವಳಿಯಲ್ಲಿ ಶ್ರಾವಣಿಗೆ ಪ್ರಥಮ ಸ್ಥಾನ

ಸೋಮವಾರಪೇಟೆ, ಅ.10: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆಸಿದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಇಲ್ಲಿನ ಸಂತ ಜೋಸೆಫರ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಎಂ.ಯು.ಶ್ರಾವಣಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಾದಾಪುರದ ಚೆನ್ನಮ್ಮ ಜೂನಿಯರ್ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿದ ಈಕೆ, ತೋಳೂರುಶೆಟ್ಟಳ್ಳಿಯ ಎಂ.ಈ.ಉದಯಕುಮಾರ್ ಮತ್ತು ಲತಾ ದಂಪತಿ ಪುತ್ರಿ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: