ಕರ್ನಾಟಕ

ಕ್ಲಸ್ಟರ್ ಮಟ್ಟದ ಸಮಾಲೋಚನಾ ಸಭೆ

ಮಡಿಕೇರಿ, ಅ.10: ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ಕ್ಲಸ್ಟರ್ ಮಟ್ಟದ ಸಮಾಲೋಚನಾ ಸಭೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಭಾಗೀಯ ಉಪಾಧ್ಯಕ್ಷರಾದ ಪಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಮಾತನಾಡಿ, ಇಂದು ಶಿಕ್ಷಣ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕನಾಗಿ ಶಿಕ್ಷಕರು ತಮ್ಮ ಕಲಿಕಾಮಟ್ಟವನ್ನು ವೃದ್ದಿಗೊಳಿಸಿಕೊಳ್ಳಬೇಕಿದೆ. ಅದಕ್ಕಾಗಿ ಪ್ರತಿನಿತ್ಯ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ತಮ್ಮ ಕಲಿಕಾಮಟ್ಟವನ್ನು ಹೆಚ್ಚಿಸಿಕೊಳ್ಳಲು ತರಬೇತಿಯನ್ನು ಇಲಾಖೆಯ ಮೂಲಕ ನೀಡುತ್ತಿದ್ದು, ಇದನ್ನು ಎಲ್ಲ ಶಿಕ್ಷಕರು ಸದುಪಯೋಗಪಡಿಸಿಕೊಳ್ಳಬೇಕೆಂದರು. ಕಾರ್ಯಾಗಾರದಲ್ಲಿ ಆನ್‍ಲೈನ್ ಲಾಗಿನ್ ಆಗುವುದರ ಬಗ್ಗೆ ಬಿಆರ್‍ಪಿ ವಿಜಯಕುಮಾರ್ ಮಾಹಿತಿ ನೀಡಿದರು. ಶಿಕ್ಷಕರು ತಮ್ಮ ಇಮೈಲ್ ಖಾತೆಯನ್ನು ತೆರೆದು ಆ ಮೂಲಕ ಲಾಗಿನ್ ಆಗಬೇಕು. ಅದರಲ್ಲಿ 28 ಷೆಡ್ಯೂಲ್‍ಗಳಿದ್ದು, ಅದರಲ್ಲಿ ತಮಗೆ ಅನುಕೂಲವಾದ ಒಂದನ್ನು ಆಯ್ಕೆ ಮಾಡುವಂತೆ ತಿಳಿಸಿದರು.

ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎನ್. ಮಂಜುನಾಥ್ ಕುಮಾರ್, ಕಾರ್ಯದರ್ಶಿ ಬಸವರಾಜು, ಶಾಲಾ ಸಹ ಶಿಕ್ಷಕ ರಮೇಶ್, ನೋಡೆಲ್ ಅಧಿಕಾರಿಯಾಗಿ ಡಯಟ್‍ನ ಉಪನ್ಯಾಸಕರಾದ ಸಿದ್ಧೇಶ್ ಹಾಗೂ ನಳಿನಾಕ್ಷಿ ಇದ್ದರು. ಕಾರ್ಯಾಗಾರದಲ್ಲಿ ಸಿಆರ್‍ಪಿಗಳಾದ ಬೆಸೂರಿನ ಮಲ್ಲಿಕಾರ್ಜುನ, ಹಂಡ್ಲಿ ಮಧುಕುಮಾರ್, ಗೋಣಿಮರೂರಿನ ಚಿನ್ನಪ್ಪ, ಕಾಜೂರಿನ ಅಶೋಕ್, ಶನಿವಾರಸಂತೆಯ ನಿರ್ಮಲ, ಶಾಂತಳ್ಳಿಯ ಶಿವಣ್ಣ, ಮಾದಾಪುರದ ವಸಂತಕುಮಾರ್, ನಿಡ್ತ ಶಾಲೆಯ ರೋಸಿ, ಗೌಡಳ್ಳಿಯ ಜವರಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ವರದಿ: ಕೆಸಿಐ, ಎಲ್.ಜಿ)

 

 

Leave a Reply

comments

Related Articles

error: