
ಮೈಸೂರು
ಕಬ್ಬು ದರ ನಿಗದಿಗೆ ಕಬ್ಬು ಬೆಳೆಗಾರರ ಜೊತೆ ಜಿಲ್ಲಾಧಿಕಾರಿಗಳ ಸಭೆ : ಇಳುವರಿ ನೋಡಿ ದರ ನಿಗದಿ ; ಡಿ.ರಂದೀಪ್
ಮೈಸೂರು,ಅ.10:- ಕಬ್ಬು ದರ ನಿಗದಿ ಹಾಗೂ 2016-17ರ ಅಂತಿಮ ಬಾಕಿ ಕಂತು ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಬ್ಬು ಬೆಳೆಗಾರರ ಜೊತೆ ಸಭೆ ನಡೆಯಿತು.
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ ಕಬ್ಬಿಗೆ ಬೆಲೆ ನಿಗದಿಪಡಿಸಬೇಕು. ಆಲೆಮನೆಗಳಲ್ಲಿ 3000ರೂ.ಕೊಟ್ಟು ಕಬ್ಬನ್ನು ತಗೋತಿದ್ದಾರೆ. ಫ್ಯಾಕ್ಟರಿಯವರು ಯಾಕೆ ತೆಗೆದುಕೊಳ್ಳುತ್ತಿಲ್ಲ. ಅಷ್ಟೇ ಅಲ್ಲದೇ ಬಳ್ಳಾರಿಯಲ್ಲಿ 3600ರೂ ಕೊಟ್ಟು ಕಬ್ಬು ಖರೀದಿ ಮಾಡುತ್ತಾರೆ. ಇಲ್ಲಿಯೂ 3600ರೂ ಕೊಡಲಿಕ್ಕಾಗಲ್ಲವಾ ಎಂದು ಪ್ರಶ್ನಿಸಿದರು. ಅದಕ್ಕುತ್ತರಿಸಿದ ಜಿಲ್ಲಾಧಿಕಾರಿ ಡಿ.ರಂದೀಪ್ ಇಳುವರಿ ನೋಡಿ ಅದಕ್ಕೆ ಬೆಲೆ ನಿಗದಿಪಡಿಸುತ್ತೇವೆ. ಇದಕ್ಕಾಗಿ ಟೆಕ್ನಿಕಲ್ ತಂಡವನ್ನು ರಚಿಸಲಾಗುತ್ತಿದೆ ಎಂದರು. ತಂಡವನ್ನು ಯಾರ ನೇತೃತ್ವದಲ್ಲಿ ರಚಿಸಲಾಗುತ್ತದೆ ಎಂದು ಕಬ್ಬು ಬೆಳೆಗಾರರು ಪ್ರಶ್ನಿಸಿದರು. ಸಭೆಯಲ್ಲಿ ಬಣ್ಣಾರಿ ಕಾರ್ಖಾನೆಯ ಮುಖ್ಯಸ್ಥರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಕಾ.ರಾಮೇಶ್ವರಪ್ಪ, ಕಬ್ಬು ಬೆಳೆಗಾರರ ಸಂಘದ ಬಸವರಾಜು, ದೇವರಾಜು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)