ಪ್ರಮುಖ ಸುದ್ದಿಮೈಸೂರು

ದರೋಡೆಗೆ ಹೊಂಚುಹಾಕಿ ಕುಳಿತ ಅಂತರರಾಜ್ಯ 10 ಮಂದಿ ಹೆದ್ದಾರಿ ದರೋಡೆಕೋರರ ಬಂಧನ

ಮೈಸೂರು,ಅ.10:- ನಂಜನಗೂಡು ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ  ರಾಷ್ಟ್ರೀಯ ಹೆದ್ದಾರಿ ಕಳಲೆ ಗೇಟ್ ಸಮೀಪ ದರೋಡೆಗೆ ಹೊಂಚುಹಾಕಿ ಕುಳಿತಿದ್ದ  10 ಮಂದಿ ಅಂತರರಾಜ್ಯ ಹೆದ್ದಾರಿ ದರೋಡೆಕೋರರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಹೆಚ್.ಡಿ ಕೋಟೆ ತಾಲೂಕಿನ ಹೊಸೂರು ಮಚ್ಚೂರು ಗ್ರಾಮದ ಅರುಣ್ (26),  ಡಿ.ಬಿ ಕುಪ್ಪೆ ಆನೆ ಮಾಳ ಗ್ರಾಮದ ಕಬೀರ್(36),  ಡಿ.ಬಿ ಕುಪ್ಪೆ ಹೊಸೂರು ಗ್ರಾಮ ರಮೇಶ(29), ಕೇರಳ ರಾಜ್ಯದ ವೈನಾಡು ಜಿಲ್ಲೆಯ ನಿವಾಸಿಗಳಾದ ಮನೋಜ್(42), ಅಬ್ದುಲ್ ಸುಹೇಲ್, ಸಫನ್(24), ಅಬ್ದುಲ್ ಸಮದ್(27), ರಮೀಶ್ (23), ನಿಯಾಸ್ (23), ಮಹಮದ್ ಕೈಸ್ಸ್(21) ಎಂದು ಗುರುತಿಸಲಾಗಿದೆ. ನೌಫಲ್ ಹಾಗೂ ಸಾಬು ತಲೆ‌ ಮರೆಸಿಕೊಂಡಿದ್ದಾರೆ.

ಇವರು ಮೈಸೂರು, ಮಂಡ್ಯ, ಮಡಿಕೇರಿ, ಕೇರಳ ‌ಸೇರಿ‌ ಹಲವೆಡೆ ವಾಹನಗಳನ್ನ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಬಂಧಿತರಿಂದ 1.16 ಲಕ್ಷ ನಗದು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಳಲೆ ಗೇಟ್ ಸಮೀಪ ಈ ಹತ್ತು ಮಂದಿ ಕಬಿನಿ ನಾಲೆ ಬಳಿ ಕಾರುಗಳನ್ನ ನಿಲ್ಲಿಸಿಕೊಂಡು ದರೋಡೆಗೆ ಹೊಂಚು ಹಾಕಿ ಕುಳಿತಿದ್ದರ. ಈ ವೇಳೆ ದಾಳಿ ನಡೆಸಿದ ಪೊಲೀಸರು ಇವರನ್ನು ಬಂಧಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: