ದೇಶಪ್ರಮುಖ ಸುದ್ದಿವಿದೇಶ

ಷೇರು ಮರುಖರೀದಿಗೆ ನ.1ರಿಂದ ಚಾಲನೆ ನೀಡಲಿರುವ ಇನ್ಫೋಸಿಸ್

ನವದೆಹಲಿ (ಅ.10): ಸಾಫ್ಟ್’ವೇರ್ ಸೇವಾಸಂಸ್ಥೆ ಇನ್ಫೋಸಿಸ್ ಇದೇ ನ.1ರಿಂದ 13 ಸಾವಿರ ಕೋಟಿ ರೂ. ಷೇರು ಮರುಖರೀದಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಹೇಳಿದೆ.

ಆ. 19 ರಂದು ಷೇರು ಮರುಖರೀದಿಯ ಪ್ರಸ್ತಾವನೆಯನ್ನು ಇನ್ಫೋಸಿಸ್ ಆಡಳಿತ ಮಂದಳಿ ಅಂಗೀಕರಿಸಿತ್ತು. ಇದೀಗ ಸಂಸ್ಥೆಯ ಷೇರು ಮರುಖರೀದಿ ಸಮಿತಿಯು ಈ ತೀರ್ಮಾನ ಕೈಗೊಂಡಿದ್ದು ಸಂಸ್ಥೆಯ ಈಕ್ವಿಟಿ ಷೇರುದಾರರ ಹೆಸರನ್ನೊಳಗೊಂಡ ಪತ್ರವನ್ನು ಕಳುಹಿಸಲಾಗುವುದಾಗಿ ಹೇಳಿದೆ. ಈ ಈಕ್ವಿಟಿ ಪತ್ರ ಪಡೆದವರಿಗೆ ಮರುಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅರ್ಹತೆ ಇದ್ದು, ಇನ್ಫೋಸಿಸ್ ರೆಗ್ಯುಲೇಟರಿ ಫೈಲಿಂಗ್‍ನಲ್ಲಿ ಮಾಹಿತಿ ನೀಡಲಾಗಿದೆ.

36 ವರ್ಷದ ಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಷೇರುಗಳ ಮರುಖರೀದಿಯಲ್ಲಿ ತೊಡಗಿದ್ದು 11.30 ಕೋಟಿ ಷೇರುಗಳನ್ನು 1,150 ಕೋಟಿ ರೂ. ಗೆ ಖರೀದಿಸುತ್ತಿದೆ. ಇದೀಗ ಇನ್ಫೋಸಿಸ್ ತನ್ನ ಷೇರುದಾರರಿಗೆ ಹೆಚ್ಚುವರಿ ಬಂಡವಾಳವನ್ನು ಹಿಂದಿರುಗಿಸಲು ಮುಂದಾಗುತ್ತಿರುವ ಈ ಸಮಯದಲ್ಲಿ ಸಂಸ್ಥೆಯ ಕಲವು ಸಂಸ್ಥಾಪಕರು ಮತ್ತು ಉನ್ನತ-ಆಡಳಿತ ವರ್ಗ, ಮಾಜಿ ಕಾರ್ಯನಿವಹಣಾ ಅಧಿಕಾರಿಗಳಿಂದ ಷೇರು ಮರುಖರೀದಿಯ ಬೇಡಿಕೆ ಬಹಳ ಹಿಂದೆಯೇ ಬಂದ್ದಿತ್ತು ಎಂಬುದು ಗಮನಾರ್ಹ. ಷೇರು ಮರುಖರೀದಿಗಳು ಸಾಮಾನ್ಯವಾಗಿ ಪ್ರತಿ ಷೇರುಗಳ ಗಳಿಕೆಗಳನ್ನೂ ಸುಧಾರಿಸುತ್ತವೆ ಮತ್ತು ಷೇರುದಾರರಿಗೆ ಹೆಚ್ಚುವರಿ ಹಣವನ್ನು ಹಿಂದಿರುಗುವಂತೆ ಮಾಡಿ ಲಾಭ ವನ್ನು ತಂದುಕೊಡುತ್ತದೆ.

(ಎನ್‍ಬಿಎನ್)

Leave a Reply

comments

Related Articles

error: