ಪ್ರಮುಖ ಸುದ್ದಿ

ಕನಕಪುರ ಬಸ್ ನಿಲ್ದಾಣದ ಬಳಿ ಹೆಣ್ಣು ಭ್ರೂಣ ಪತ್ತೆ

ಪ್ರಮುಖ ಸುದ್ದಿ, ರಾಮನಗರ, ಅ.೧೦: ನಿರ್ದಯಿ ತಾಯಿಯೊಬ್ಬಳು ಹೆಣ್ಣು ಭ್ರೂಣವನ್ನು ಬಸ್ ನಿಲ್ದಾಣದಲ್ಲಿ ಬಿಸಾಡಿ ಹೋಗಿರುವ ಘಟನೆ ಕನಕಪುರದಲ್ಲಿ ನಡೆದಿದೆ.
ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿ ಹೆಣ್ಣು ಭ್ರೂಣವೆಂದು ತಿಳಿದು ಅದನ್ನು ಕನಕಪುರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಬಿಸಾಡಿದ್ದಾರೆ. ಸೋಮವಾರ ರಾತ್ರಿ ಬಿಸಾಡಿದ್ದಾರೆ ಎಂದು ಶಂಕಿಸಲಾಗಿದೆ. ಭ್ರೂಣವನ್ನು ಕನಕಪುರ ಆಸ್ಪತ್ರೆಯ ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದು, ಹೆಣ್ಣು ಭ್ರೂಣವೆಂದು ಖಚಿತಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕನಕಪುರ ಪೊಲೀಸರು ಪರಿಶೀಲನೆ ನಡೆಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: