ಸುದ್ದಿ ಸಂಕ್ಷಿಪ್ತ

ಕೊಡವ ಮಕ್ಕಡ ಕೂಟದಿಂದ “ಕಾವೇರಿ ಚಂಗ್ರಾದಿ ಯಾತ್ರೆ”

ಮಡಿಕೇರಿ,ಅ.10: ಕೊಡವ ಮಕ್ಕಡ ಕೂಟ(ರಿ)ದ ವತಿಯಿಂದ ಕಾವೇರಿ ಚಂಗ್ರಾಂದಿ ಯಾತ್ರೆಯನ್ನು ಅಕ್ಟೋಬರ್ 17 ರಂದು ಕೈಗೊಳ್ಳಲಾಗುವುದೆಂದು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಗು ಪದಾಧಿಕಾರಿಗಳು ಪ್ರಟಣೆಯಲ್ಲಿ ತಿಳಿದ್ದಾರೆ.

ಹಲವು ವರ್ಷಗಳಿಂದ ಕೊಡವರ ಕುಲದೇವರಾದ ಕಾವೇರಿ ಮಾತೆಯ ಉಗಮ ಸ್ಥಾನದಲ್ಲಿ ಅಕ್ಟೋಬರ್ 17 ರಂದು ನಡೆಯವ ತೀರ್ಥೋದ್ಭಕದಂದು ಮಡಿಕೇರಿಯಿಂದ ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಕೊಡವರ ಸಾಂಪ್ರದಾಯಿಕ ಉಡುಪು ಧರಿಸಿ ದುಡಿಕೊಟ್ಟ್ ಹಾಡಿನೊಂದಿಗೆ ತಲಕಾವೇರಿಗೆ ತೆರಳಿ ತೀರ್ಥವನ್ನು ತರಲಾಗುತ್ತಿತ್ತು. ಈ ವರ್ಷ ಮಧ್ಯಾಹ್ನ 12.33ರ ಸಮಯದಲ್ಲಿ ಪವಿತ್ರ ತೀರ್ಥೋದ್ಭವವಾಗುವುದರಿಂದ ಕೊಡವ ಮಕ್ಕಡಕೂಟ ಹಾಗೂ ಹಲವು ಸಂಘಟಕರು ಕೊಡವ ಸಂಪ್ರದಾಯದ ಉಡುಪು ಧರಿಸಿ ದುಡಿಕೊಟ್ಟ್ ಹಾಡಿನೊಂದಿಗೆ ತೆರಳಿ ದೇವರ ನೆಲೆಯಲ್ಲಿ ದೇವರ ಹಾಡನ್ನು ತೀರ್ಥೋದ್ಭವದವರೆಗೆ ಹಾಡಲಾಗುವುದೆಂದು ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

 

Leave a Reply

comments

Related Articles

error: