ಪ್ರಮುಖ ಸುದ್ದಿ

ಮಕ್ಕಳಿಗೆ ಶಾಲಾ ಹಂತದಲ್ಲೇ ಪರಿಸರ ಜಾಗೃತಿ ಮೂಡಿಸಬೇಕು: ನರೇಂದ್ರ

ಪ್ರಮುಖ ಸುದ್ದಿ, ಹನೂರು, ಅ.೧೦: ಪ್ರತಿಯೊಬ್ಬರಿಗೂ ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆ ಮಾಡುವ ಅರಿವನ್ನು ಮೂಡಿಸಬೇಕು. ಶಾಲಾ ಹಂತದಲ್ಲೇ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಶಾಸಕ ನರೇಂದ್ರ ತಿಳಿಸಿದರು.
ಹನೂರು ಪಟ್ಟಣದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಲೈ ಮಹದೇಶ್ವರ ವನ್ಯಜೀವಿ ವಿಭಾಗ ಮತ್ತು ಕಾವೇರಿ ವನ್ಯಜೀವಿ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ೬೩ನೇ ವನ್ಯಜೀವಿ ಸಪ್ತಾಹ ಆಚರಣೆ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಅರಣ್ಯ ಮತ್ತು ವನ್ಯಜೀವಿ ರಕ್ಷಣೆ ದೃಷ್ಟಿಯಿಂದ ಸರ್ಕಾರವುಚಿಣ್ಣರ ವನದರ್ಶನದಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಜ್ಯದಲ್ಲೇ ಅಪರೂಪದ ವನ್ಯಜೀವಿ ಮತ್ತು ಸಸ್ಯ ಸಂಪತ್ತು ಹೊಂದಿರುವ ಜಿಲ್ಲೆಯಾಗಿದ್ದು ಬಿಆರ್‌ಟಿ ಮತ್ತು ಬಂಡಿಪುರ ಅರಣ್ಯಪ್ರದೇಶದಲ್ಲಿ ಹೆಚ್ಚು ಹುಲಿ ಆನೆಗಳಿವೆ. ಉತ್ತಮ ಪರಿಸರದಲ್ಲಿ ಬದುಕುತ್ತಿರುವ ನಾವೇ ಪುಣ್ಯವಂತರು ಎಂದು ಹೇಳಿದ ಅವರು ಅರಣ್ಯ ರಕ್ಷಕರು ಕಾಡಂಚಿನ ವ್ಯಾಪ್ತಿಯ ಜನರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿ.ಪಂ.ಉಪಾಧ್ಯಕ್ಷ ಬಸವರಾಜು, ಡಿಎಫ್‌ಒ ಡಾ.ಮಾಲತಿ ಪ್ರಿಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: