ಪ್ರಮುಖ ಸುದ್ದಿ

ಸಾರ್ವಜನಿಕರಲ್ಲಿ ವನ್ಯಜೀವಿಗಳ ಅರಿವು ಮೂಡಿಸಿದ ಜಾಗೃತಿ ಜಾಥಾ

ಪ್ರಮುಖ ಸುದ್ದಿ, ಹನೂರು, ಅ.೧೦: ಸಾರ್ವಜನಿಕರಲ್ಲಿ ಆನೆಗಳ ಕುರಿತು ಅರಿವು ಮೂಡಿಸಲು ಅರಣ್ಯ ಇಲಾಖೆ ವತಿಯಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಆನೆಗಳ ಬಗ್ಗೆ ಅರಿವು ಮೂಡಿಸಲು ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಂದ ಜಾಥ ನಡೆಸಲಾಯಿತು. ಮತ್ತು ಅರಣ್ಯದಂಚಿನ ಗ್ರಾಮದ ಜನರಿಗೆ ಸಾಂಕೇತಿಕವಾಗಿ ಗ್ಯಾಸ್ ವಿತರಣೆ ಹಾಗೂ ಜೇನುಪೆಟ್ಟಿಗೆಯನ್ನು ವಿತರಣೆ ಮಾಡಲಾಯಿತು. ವಿವಿಧ ಶಾಲಾ ಕಾಲೇಜುಗಳ ಮಕ್ಕಳು ಸಾರ್ವಜನಿಕರಲ್ಲಿ ವನ್ಯಜೀವಿಗಳ ಬಗೆಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಡಿಎಫ್‌ಒ ಡಾ.ಪಿ.ರಮೇಶ್‌ಕುಮಾರ್, ಕೊಳ್ಳೇಗಾಲ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಜಾವದ್ ಅಹಮ್ಮದ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಮತ ಮಹಾದೇವ, ಸದಸ್ಯರಾದ ಬಾಲರಾಜು ನಾಯ್ಡು, ನಾಗಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವಸ್ವಾಮಿ, ಅರಣ್ಯ ಅಧಿಕಾರಿಗಳಾದ ಅಂಕರಾಜು, ಮುತ್ತಯ್ಯಗೌಡ, ವನೀತ, ಲೋಕೇಶ್‌ಮೂರ್ತಿ, ಜಯವರ್ಧನ್ ತಲ್ವಾರ್, ಶಂಕರ್ ಅಂತರಗಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: