ಕರ್ನಾಟಕ

ಸರ್ಕಾರ ತಂದಿರುವ ಯೋಜನೆಗಳನ್ನು ಪಡೆದು ಸಮಾಜ ಮುಖಿಯಾಗಿ ಬೆಳೆಯಬೇಕು : ಆರ್ ಪಿ ಗೌಡ

ರಾಜ್ಯ(ಮಂಡ್ಯ)ಅ.10:- ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಮದ್ದೂರು ಪುರಸಭೆ ವಿಕಲಚೇತನ ಕಾನೂನು ಅರಿವು ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಮದ್ದೂರು ಪುರಸಭೆಯ ಸಿಡಿಎಸ್ ಭವನದಲ್ಲಿ ಆಯೋಜಿಸಲಾದ ಶಿಬಿರವನ್ನು  ಮದ್ದೂರು ಪ್ರಧಾನ ನ್ಯಾಯಾಲಯದ ಹಿರಿಯ  ನ್ಯಾಯಾಧೀಶ ಆರ್ ಪಿ ಗೌಡ  ಉದ್ಘಾಟಿಸಿದರು.  ಬಳಿಕ ಮಾತನಾಡಿದ ಅವರು ಅಂಗವಿಕಲರಿಗೆ ಸರ್ಕಾರ ತಂದಿರುವ ಅನೇಕ ಯೋಜನೆಗಳನ್ನು ವಿಕಲಚೇತನರು ಪಡೆದು ಸಮಾಜ ಮುಖಿಯಾಗಿ  ಬೆಳೆಯಬೇಕು. ಶೋಷಣೆ ತಡೆಯಲು ಸಂವಿಧಾನದಲ್ಲಿ ಅನೇಕ ಕಾನೂನುಗಳಿದ್ದು ಇವುಗಳ ಸದುಪಯೋಗ ಪಡಿಸಿಕೊಳ್ಳಲು ಹೇಳಿದರು.

ಈ ಸಂದರ್ಭ  ಪುರಸಭೆ ಅಧ್ಯಕ್ಷರಾದ ಕುಮಾರ್, ಪುರಸಭಾ ಸಂಘಟನಾ ಅಧಿಕಾರಿ ಮಹೇಶ್,ಉಪಾಧ್ಯಕ್ಷೆ ನಾಗರತ್ನ ಸಿವಿಲ್ ನ್ಯಾಯಾಧೀಶ ವರದ ರಾಜು ಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ   ಅಶೋಕ್ ಕುಮಾರ್ ಹಾಗೂ  ಮಹಾಂತೇಶ್ ಹಿರೇಮಠ್ ,ಮಹರ್ಷಿ ಅಂಧ ಪರಿಷತ್ ವ್ಯವಸ್ಥಾಪಕರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಅಂಗವಿಕಲರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: