
ದೇಶಪ್ರಮುಖ ಸುದ್ದಿ
ಭಾರತ ಬಿಜೆಪಿ ಮುಕ್ತವಾಗಲಿ ಎಂದು ಆಶಿಸುವುದಿಲ್ಲ : ರಾಹುಲ್ ಗಾಂಧಿ
ರಾಜ್ಯ(ಗುಜರಾತ್)ಅ.10:- ಗುಜರಾತ್ ವಿಧಾನ ಸಭಾ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಶಕ್ತಿಯನ್ನು ವ್ಯಯಿಸುತ್ತಿದ್ದಾರೆ.
ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಅವರ ಭಾಷಣಗಳು ಮೊದಲಿಗಿಂತಲೂ ಗಂಭೀರವಾಗಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅವರ ಭಾಷಣವನ್ನು ಕೇಲಿದ ನಂತರ ಕಾಂಗ್ರೆಸ್ ಕಾರ್ಯಕರ್ತರಲ್ಲಿಯೂ ಉತ್ಸಾಹ ಮೂಡತೊಡಗಿದೆ. 2014ರ ಸೋಲಿನ ನಂತರ ಬಿಜೆಪಿ ಸಾಕಷ್ಟು ಕಲಿಸಿದೆ. ಇದರ ನಂತರ ಕಾಂಗ್ರೆಸ್ ಮುಖ್ತ ಭಾರತ ಮಾಡಲು ಹೊರಟಿದೆ. ಆದರೆ ಭಾರತ ಬಿಜೆಪಿ ಮುಕ್ತವಾಗಲಿ ಎಂದು ನಾನು ಆಶಿಸುವುದಿಲ್ಲ ಎಂದಿದ್ದಾರೆ. 2014ರ ಲೋಕಾ ಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ಮುಕ್ತ ಭಾರತ ನಮ್ಮದಾಗಬೇಕು ಎಂದಿದ್ದರು. ಅದನ್ನೇ ಬಿಜೆಪಿಯವರು ಚುನಾವಣೆಯಲ್ಲಿ ಹೇಳಿಕೊಂಡು ಬರುತ್ತಿದ್ದರು. ಪ್ರಧಾನಮಂತ್ರಿಯ ಜೊತೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಅದನ್ನೇ ಹೇಳಿದ್ದರು. (ಎಸ್.ಎಚ್)