ಕರ್ನಾಟಕ

ಮಹದೇಶ್ವರ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲು ಶಾಸಕ ಎಸ್.ಜಯಣ್ಣ ಸೂಚನೆ

ರಾಜ್ಯ(ಚಾಮರಾಜನಗರ)ಅ.10:- ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಕ್ರೀಡಾಂಗಣವನ್ನು ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಶಾಸಕ ಎಸ್.ಜಯಣ್ಣ ಸೂಚಿಸಿದರು.

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ಕ್ರೀಡಾಂಗಣದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕ್ರೀಡಾಂಗಣದ ಮುಂಭಾಗದಲ್ಲಿ ಕಮಾನುಗೇಟಿನ, ಉತ್ತರ ದಕ್ಷಿಣದಲ್ಲಿ ಚೈನ್‍ಲಿಂಕ್ ಫೇನ್ಸಿಂಗ್ ಸುತ್ತುಗೋಡೆ, ಕ್ರೀಡಾಂಗಣದ ಒಳಭಾಗದಲ್ಲಿ 400 ಮೀ ಅಥ್ಲೆಟಿಕ್ ಟ್ರ್ಯಾಕ್, ಆವರಣ ಹಾಗೂ ಅಥ್ಲೆಟಿಕ್ ಸುತ್ತಾ ಮಳೆನೀರು ನಿಲ್ಲದಂತೆ ಸುತ್ತಲೂ ಚರಂಡಿ, ಪೈಪ್‍ಲೈನ್, ಪೆವಿಲಿಯನ್ ಕಟ್ಟಡಕ್ಕೆ ಟ್ರಸ್ ಮತ್ತು ಶೀಟ್ ರೂಫ್ ಆಳವಡಿಸುವಂತೆ ಸೇರಿದಂತೆ ಇನ್ನೀತರ ಕಾಮಗಾರಿ ಮಾಡುವಂತೆ ಸೂಚಿಸಿದರು.

ಕ್ರೀಡಾಂಗಣ ಸಮಿತಿ ರಚನೆ ಮಾಡುವ ಮೂಲಕ ಅಂತರರಾಷ್ಟ್ರ, ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ಥಳೀಯ ಕ್ರೀಡಾಪಟುಗಳನ್ನು ಆಯ್ಕೆ ಮಾಡುವಂತೆ ಅಧಿಕಾರಿಗಳಿಗೆ ಹೇಳಿದರು. ಕ್ರೀಡೆಯಲ್ಲಿ ಆಸಕ್ತಿಯುಳ್ಳ ಹಿರಿಯ ಕ್ರೀಡಾಪಟುಗಳ ಅನುಭವಗಳಂತೆ ಉತ್ತಮ ಕ್ರೀಡಾಂಗಣವನ್ನು ರೂಪಿಸುವ ಮೂಲಕ ಸುಸಜ್ಜಿತ ಹೈಟೆಕ್ ಕ್ರೀಡಾಂಗಣವನ್ನು ಪ್ರಾರಂಭಿಸೋಣ ಎಂದು ತಿಳಿಸಿದರು.

ಸಭೆಯಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಚೆಲುವಯ್ಯ, ತಾಲೂಕು ದೈಹಿಕ ಪರಿವೀಕ್ಷಕ ಮಹದೇವ, ಲೋಕೋಪಯೋಗಿ ಇಲಾಖೆ ಎಇಇ ದೊರೈಸ್ವಾಮಿ, ಕ್ರೀಡಾಂಗಣದ ವ್ಯವಸ್ಥಾಪಕ ರಂಗಸ್ವಾಮಿ, ಬಸವಣ್ಣ, ನಿರ್ಮಿತಿ ಕೇಂದ್ರದ ಪ್ರತಾಪ್, ನಗರಸಭೆಯ ಲಿಂಗರಾಜು, ತಾ.ಪಂ ವ್ಯವಸ್ಥಾಪಕ ಅರಸು ಹಾಜರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: