ಮೈಸೂರು

ಹಿರಿಯ ಕಾಂಗ್ರೇಸ್ ಮುಖಂಡ ರಾಜೇಗೌಡ ವಿಧಿವಶ

ಮೈಸೂರು,ಅ.10: ಪಿರಿಯಾಪಟ್ಟಣ ತಾಲೂಕಿನ ಮೆಲ್ಲಹಳ್ಳಿ ಗ್ರಾಮದ ಹಿರಿಯ ಕಾಂಗ್ರೇಸ್ ಮುಖಂಡ ರಾಜೇಗೌಡ(ರಾಜು) ಮರದಿಂದ ಆಯತಪ್ಪಿ ಬಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

58 ವರ್ಷದ ರಾಜೇಗೌಡ ಪತ್ನಿ ರೇಣುಕಾ, ಪುತ್ರ ಆದರ್ಶ್ ಸೇರಿದಂತೆ ಅಪಾರ ಬಂಧುಬಳಗವನ್ನು ಆಗಲಿದ್ದಾರೆ. ಶಾಸಕ ಕೆ.ವೆಂಕಟೇಶ್ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಅಂತ್ಯಸಂಸ್ಕಾರ ಮೆಲ್ಲಹಳ್ಳಿಯ ಮೃತರ ಜಮೀನಿನಲ್ಲಿ ಸೋಮವಾರ ಸಂಜೆ ನಡೆಯಿತು. (ಕೆ.ಎಸ್,ಎಸ್,ಎಚ್)

Leave a Reply

comments

Related Articles

error: