ಪ್ರಮುಖ ಸುದ್ದಿಮೈಸೂರು

ಅ.13ರಂದು ಪೆಟ್ರೋಲ್ ಬಂಕ್ ಗಳ ಸ್ಥಗಿತ : ಶಶಿಕಲಾ ನಾಗರಾಜ್

ಮೈಸೂರು,ಅ.10 : ಸಂಯುಕ್ತ ಪೆಟ್ರೋಲಿಯಂ ಫ್ರಂಟ್ ಕರೆಯ ಮೇರೆಗೆ  ರಾಷ್ಟ್ರವ್ಯಾಪಿ ತೈಲ ಖರೀದಿ ಮತ್ತು ಮಾರಾಟ ಸ್ಥಗಿತ ನಡೆಸಲಿದ್ದು, ಅದರಂತೆ ಮೈಸೂರಿನಲ್ಲಿಯೂ ಅ.13ರಂದು ಪೆಟ್ರೊಲ್ ಬಂಕ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಎಫ್‌ಎಂಪಿಟಿ ಅಧ್ಯಕ್ಷೆ ಶಶಿಕಲಾ ನಾಗರಾಜ್ ತಿಳಿಸಿದರು.

ಫೆಡರೇಷನ್ ಆಫ್ ಮೈಸೂರು ಪೆಟ್ರೋಲಿಯಂ ಟ್ರೇಡರ್ಸ್ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಮಧ್ಯರಾತ್ರಿ 12 ಗಂಟೆಯಿಂದ ಮರುದಿನ ಮಧ್ಯಾಹ್ನ 12 ಗಂಟೆಯವರೆಗೆ  ಪೆಟ್ರೋಲ್ ಬಂಕ್‌ಗಳು ತಮ್ಮ ಸೇವೆಯನ್ನು ಸ್ಥಗಿಗೊಳಿಸಲಿದ್ದು, ಸಾರ್ವಜನಿಕರು  ಸಹಕರಿಸಬೇಕೆಂದು ತಿಳಿಸಿದರು.

ಈಗಾಗಲೇ  ಹಲವು ಸಮಸ್ಯೆಗಳ ಪಟ್ಟಿ ಮಾಡಿ ಸರ್ಕಾರದ ಗಮನಕ್ಕೆ ತರಲಾಗಿದ್ದು, ಯಾವುದೇ ಸಮಸ್ಯೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದ ಅವರು, ಒಂದು ವೇಳೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಅ.27 ರಂದು ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳುತ್ತೇವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾದರೇ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಹೇಳಿದರು.

ನಂತರ ಮಾತನಾಡಿದ ಬಸವೇಗೌಡ, 25 ಪೈ. 50 ಪೈ. ಎಂದು ಹೇಳಿ ಈಗಾಗಲೇ ಸರ್ಕಾರ 12 ರೂ.ವರೆಗೆ ಸಾರ್ವಜನಿಕರ ಅರಿವಿಗೆ ಬಾರದಂತೆ ಬೆಲೆ ಏರಿಕೆ ಮಾಡಿದೆ ಎಂದು ಆರೋಪಿಸಿದ ಅವರು,  ಕೇಂದ್ರ ಸರ್ಕಾರ ಒಂದು ದೇಶ, ಒಂದು ತೆರಿಗೆ ಎಂದು ಜಿಎಸ್‌ಟಿಯನ್ನು ಜಾರಿಗೆ ತಂದಿತು. ಆದರೆ ಲಿಕ್ಕರ್ ಮತ್ತು ತೈಲೋತ್ಪನ್ನಗಳನ್ನು ಇದರಿಂದ ಹೊರಗೆ ಇರಿಸಿದೆ. ಇದನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ಆಗ 40 ರಿಂದ 45 ರೂ.ಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಸಾರ್ವಜನಿಕರಿಗೆ ದೊರೆಯಲಿದೆ.

ಬೇಡಿಕೆಗಳು: 2016ರ ನವೆಂಬರ್ 4ರಂದು ನಡೆದ ಸಭೆಯ ಒಪ್ಪಂದದಂತೆ ಅನುಷ್ಟಾನಗೊಳಿಸಬೇಕು, ದೈನಂದಿನ ತೈಲದರ ಪರಿಷ್ಕರಣೆ ಸ್ಥಗಿತಗೊಳಿಸುವುದು, ಎಂ.ಡಿ.ಜಿ.ತಿದ್ದುಪಡಿಯನ್ನು ಹಿಂಒಡೆಯುವುದು, ಶೌಚಾಲಯ ನಿರ್ವಹಣೆಗಾಗಿ ಸೂಕ್ತ ನಿಯಮಾವಳಿ ರೂಪಿಸುವುದು, ತೈಲ ಮಾರಾಟ ಕಂಪನಿಗಳು ಅಳವಡಿಸಿರುವ ಆಟೋಮೆಷನ್ ನಿರ್ವಹಣೆ ವಿಫಲವಾಗಿದ್ದು, ಸೂಕ್ತ ಕಾರ್ಯತಂತ್ರ ರೂಪಿಸುವುದು ಮತ್ತು ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಆಟೋಮೆಷಿನ್ ಅಳವಡಿಸಬೇಕು.

ಗೋಷ್ಟಿಯಲ್ಲಿ ಗೋವಿಂದರಾಜು, ಬಸವೇಗೌಡ, ನಾರಾಯಣ ಸ್ವಾಮಿ, ಲೋಕೇಶ್, ರಂಜಿತ್ ಹೆಗಡೆ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: