
ಮೈಸೂರು
ಹಿರಿಯ ನಾಗರಿಕರ ಸಮಗ್ರ ಆರೈಕೆ ಕುರಿತು ಒಂದು ದಿನದ ಆರೋಗ್ಯ ತಪಾಸಣೆ
ಮೈಸೂರು,ಅ.10:- ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆ, ಮೆಡಿಸಿನ್ ಮತ್ತು ಫಾರ್ಮಾಕಾಲಜಿ ವಿಭಾಗಗಳು, ಜೆಎಸ್ ಎಸ್ ವೈದ್ಯಕೀಯ ಕಾಲೇಜು ಹಾಗೂ ಜೆಎಸ್ ಎಸ್ ಹಿರಿಯ ನಾಗರಿಕರ ಸಹಾಯವಾಣಿ ಸಹಯೋಗದಲ್ಲಿ ಹಿರಿಯರ ಶಿಕ್ಷಣ ಕಾರ್ಯಕ್ರಮ –ಹಿರಿಯ ನಾಗರಿಕರ ಸಮಗ್ರ ಆರೈಕೆ ಕುರಿತು ಒಂದು ದಿನದ ಆರೋಗ್ಯ ತಪಾಸಣೆ ಮತ್ತು ಚರ್ಚಾಕೂಟವನ್ನು ಏರ್ಪಡಿಸಲಾಗಿತ್ತು.
ಜೆಎಸ್ ಎಸ್ ಹಳೆ ಆಸ್ಪತ್ರೆಯ ಆವರಣದಲ್ಲಿರುವ ಡಾ.ಶಿವರಾತ್ರಿ ರಾಜೇಂದ್ರ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವನ್ನು ವೈದ್ಯಕೀಯ ಅಧೀಕ್ಷಕ ಡಾ.ಗುರುಸ್ವಾಮಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂತಹ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ಆಯೋಜಿಸಲು ತಿಳಿಸಿದರು. ಇದರ ಜೊತೆ ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು ಎಂಬ ಗಾದೆಯಂತೆ ಹಿರಿಯ ನಾಗರಿಕರು ಮತ್ತು ಮಕ್ಕಳನ್ನು ಸೇರಿಸಿ ಒಂದು ಕಾರ್ಯಕ್ರಮ ಆಯೋಜಿಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಪ್ರತಿಭಾ, ಫಾರ್ಮಾಕಾಲಜಿ ವಿಭಾಗದ ಡಾ.ಕಲಾಭಾರತಿ, ಡಾ.ಪುಷ್ಪ ಮತ್ತು ಹಿರಿಯ ನಾಗರಿಕರ ಸಹಾಯವಾಣಿ ಸಂಯೋಜನಾಧಿಕಾರಿ ಬಸವರಾಜು ಉಪಸ್ಥಿತರಿದ್ದರು. ಆರೋಗ್ಯ ತಪಾಸಣಾ ಶಿಬಿರದಲ್ಲಿ 180ಕ್ಕೂ ಅಧಿಕ ಹಿರಿಯರು ಪಾಲ್ಗೊಂಡಿದ್ದರು