ಪ್ರಮುಖ ಸುದ್ದಿ

ಉರುಳಿ ಬಿದ್ದ ಹಾಲಿನ ಟ್ಯಾಂಕರ್: ಸಾವಿರಾರು ಲೀಟರ್ ಹಾಲು ಮಣ್ಣುಪಾಲು

ಪ್ರಮುಖ ಸುದ್ದಿ, ಹನೂರು, ಅ.೧೦: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಟ್ಯಾಂಕರ್ ಉರುಳಿ ಬಿದ್ದು ಅಪಾರ ಪ್ರಮಾಣದ ಹಾಲು ಮಣ್ಣು ಪಾಲಾಗಿರುವ ಘಟನೆ ರಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಗತ್ತಾಪುರ ಗ್ರಾಮದಲ್ಲಿ ನಡೆದಿದೆ.
ಎಲ್ಲೇಮಾಳ ಗ್ರಾಮದ ಸುತ್ತ ಮುತ್ತಲಿನ ಹಾಲಿನ ಕೇಂದ್ರಗಳಲ್ಲಿ ಹಾಲು ತುಂಬಿಕೊಂಡು ಹೋಗುತ್ತಿದ್ದಾಗ ರಸ್ತೆ ಬದಿಗೆ ಆಯತಪ್ಪಿ ಜಾರಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಾಳೆ ತೋಟದ ಕಡೆಗೆ ಉರುಳಿ ಬಿದ್ದಿದ್ದರಿಂದ ಲಕ್ಷಾಂತರ ರೂ ಮೌಲ್ಯದ ಸಾವಿರಾರು ಲೀಟರ್ ಹಾಲು ಮಣ್ಣು ಪಾಲಾಗಿದೆ. (ವರದಿ ಬಿ.ಎಂ)

 

Leave a Reply

comments

Related Articles

error: