ಮೈಸೂರು

ನಾಲೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರು ಪಾಲು

ಮೈಸೂರು,(ತಿ.ನರಸೀಪುರ), ಅ.10-ನಾಲೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಎಡತೊರೆ ನಾಲೆಯಲ್ಲಿ ನಡೆದಿದೆ.

ಬೆಂಗಳೂರು ನಿವಾಸಿ ಕಿರಣ್ (25), ಎಡತೊರೆ ನಿವಾಸಿ ಸುನೀಲ್ (25) ಮೃತ ದುರ್ದೈವಿಗಳು. ಎಡತೊರೆಯ ಸ್ನೇಹಿತನನ್ನು ಬೆಂಗಳೂರಿನಿಂದ ನೋಡಲು ನಾಲ್ವರು ಬಂದಿದ್ದರು. ಸ್ನೇಹಿತನ ಜೊತೆ ಈಜಲು ಹೋದ ವೇಳೆ ಘಟನೆ ನಡೆದಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ತಿ.ನರಸೀಪುರ ಪೊಲೀಸರು ಆಗಮಿಸಿದ್ದಾರೆ. ಮೃತದೇಹಕ್ಕಾಗಿ ನಾಲೆಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಈ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ-ಎಸ್.ಎನ್, ಕೆ.ಎಸ್, ಎಂ.ಎನ್)

Leave a Reply

comments

Related Articles

error: