
ಕರ್ನಾಟಕಪ್ರಮುಖ ಸುದ್ದಿ
ಯುರೇನಿಯಂ ತುಂಬಿದ್ದ ಕಂಟೇನರ್ ಪಲ್ಟಿ : ತಪ್ಪಿದ ದುರಂತ
ಕಾರವಾರ,ಅ.11: ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಸಾಗಿಸುತ್ತಿದ್ದ ಯುರೇನಿಯಂ ತುಂಬಿದ್ದ ಕಂಟೇನರ್ ಪಲ್ಟಿಯಾದ ಘಟನೆ ಕಾರವಾರ ತಾಲೂಕಿನ ಶಿರವೆ ಬಳಿ ನಡೆದಿದೆ.
ಕೇರಳದ ತಿರುವನಂತಪುರಂನ ಶ್ರೀಹರಿ ಕೋಟಾದಿಂದ ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಬಿಗಿ ಭದ್ರತೆಯಲ್ಲಿ ಕಂಟೇನರ್ ಅನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಕಂಟೇನರ್ ನಲ್ಲಿದ್ದ ನಾಲ್ಕು ಯುರೇನಿಯಂ ಪೆಟ್ಟಿಗೆಗಳು ಧರೆಗುಳಿವೆ. ಸದ್ಯ ಯಾವುದೇ ಸೋರಿಕೆಯಾಗಿಲ್ಲ. ಸ್ಥಳಕ್ಕೆ ಕೈಗಾ ಅಣು ಸ್ಥಾವರದ ಅಧಿಕಾರಿಗಳು ಹಾಗೂ ಪೂಲೀಸರು ಭೇಟಿ ನೀಡಿದ್ದು, ಬಿಗಿ ಭದ್ರತೆ ನಡುವೆ ಯುರೇನಿಯಂ ಪೆಟ್ಟಿಗೆಗಳ ರಕ್ಷಣೆ ಮಾಡಲಾಗಿದೆ. ( ವರದಿ: ಪಿ.ಜೆ )