ಕರ್ನಾಟಕ

ಮನೆಯ ಗೋಡೆ ಕುಸಿತ: ತಾಯಿ-ಮಗಳ ಸಾವು

ವಿಜಯಪುರ,ಅ.11:  ಮಳೆಯಿಂದಾಗಿ ಮನೆಯ ಗೋಡೆ ಕುಸಿದ ಪರಿಣಾಮ ತಾಯಿ-ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆಗಳು ನೆನೆದಿದ್ದ ಪರಿಣಾಮ ಇಂದು ನಸುಕಿನ ಜಾವ ಈ ಅವಘಡ ಸಂಭವಿಸಿದೆ. ಮನೆಯಲ್ಲಿ ಮಲಗಿದ್ದ  ಶಂಕ್ರಮ್ಮ ರಾಮಚಂದ್ರಪ್ಪ ಔರಾದಿ(60) ಹಾಗೂ ಮಗಳು 21 ವರ್ಷದ ಮಹಾದೇವಿ ಔರಾದಿ(20) ಮೇಲೆ ಗೋಡೆಗಳು ಕುಸಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮನೆಯಾಚೆ ಮಲಗಿದ್ದ ಶಿವಪುತ್ರ ಅಪಾಯದಿಂದ ಪಾರಾಗಿದ್ದಾರೆ. ( ವರದಿ: ಪಿ. ಜೆ )

Leave a Reply

comments

Related Articles

error: