ಕ್ರೀಡೆದೇಶ

ಆಸ್ಟ್ರೇಲಿಯಾ ತಂಡದ ಬಸ್ ಮೇಲೆ ಕಲ್ಲು ತೂರಾಟ

ಗುವಾಹಟಿ,ಅ.11-ಭಾರತ ವಿರುದ್ಧದ ಎರಡನೇ ಟಿ-20 ಪಂದ್ಯ ಗೆದ್ದ ಬಳಿಕ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಿಂದ ಹೋಟೆಲ್ ಗೆ ತೆರಳುತ್ತಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಮಂಗಳವಾರ ರಾತ್ರಿ ಗುವಾಹಟಿಯಲ್ಲಿ ನಡೆದಿದೆ.

ಆಸ್ಟ್ರೇಲಿಯಾ ಕ್ರಿಕೆಟಿಗರು ತೆರಳುತ್ತಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಆಸ್ಟ್ರೇಲಿಯಾ ಕ್ರಿಕೆಟಿಗರು ಬೆಚ್ಚಿ ಬಿದ್ದಿದ್ದಾರೆ. ಕಲ್ಲು ತೂರಾಟದಿಂದ ಬಸ್ ನ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಅದೃಷ್ಟವಶಾತ್ ಆಟಗಾರರು ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ತುಂಬಾ ಆತಂಕವಾಗಿದೆ ಎಂದು ಆಸೀಸ್ ತಂಡದ ಆಟಗಾರ ಆಯರಾನ್ ಫಿಂಚ್ ಘಟನೆ ಬಗ್ಗೆ ಟ್ವಿಟ್ ಮಾಡಿದ್ದಾರೆ.

ಕಳೆದ ತಿಂಗಳು ಬಾಂಗ್ಲಾದೇಶ ಪ್ರವಾಸದ ವೇಳೆಯಲ್ಲೂ ಆಸಿಸ್ ಆಟಗಾರರಿದ್ದ ಬಸ್ ಮೇಲೆ ಇದೇ ರೀತಿ ಕಲ್ಲು ತೂರಾಟ ನಡೆಸಲಾಗಿತ್ತು. ಬಾಂಗ್ಲಾದೇಶದ ವಿರುದ್ಧ ಚಿತ್ತಗಾಂಗ್ ನಲ್ಲಿ ಟೆಸ್ಟ್ ಕ್ರಿಕೆಟ್ ಮುಗಿಸಿ ಹೋಟೆಲ್ ಗೆ ತೆರಳುವಾಗ ಘಟನೆ ನಡೆದಿತ್ತು. ನಿನ್ನೆ ನಡೆದ ಘಟನೆ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ನೀಡಲಾಗಿರುವ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. (ವರದಿ-ಎಂ.ಎನ್)

 

Leave a Reply

comments

Related Articles

error: