ಕರ್ನಾಟಕಮೈಸೂರು

ಕರ್ನಾಟಕ ರಾಜ್ಯ ಮುಕ್ತ ವಿವಿ ಮಾನ್ಯತೆ ರದ್ದು : ನೊಂದ ವಿದ್ಯಾರ್ಥಿ ನಂದೀಶ್ ನಿಂದ ರಾಷ್ಟ್ರಪತಿಗಳಿಗೆ ದಯಾ ಮರಣ ಪತ್ರ

ಮೈಸೂರು,ಅ.11 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಯುಜಿಸಿ ಮಾನ್ಯತೆ ರದ್ದಾದ್ದರಿಂದ, ಪದವಿ ಪಡೆದ ನನ್ನಂತಹ ಲಕ್ಷಾಂತರ ಯುವಜನರ ಬದುಕು ಭವಿಷ್ಯ ಅಂಧಕಾರ ತುಂಬಿದೆ. ಆದ್ದರಿಂದ ರಾಷ್ಟ್ರಪತಿಗಳು  ದಯಾ ಮರಣ ನೀಡಬೇಕೆಂದು ಒತ್ತಾಯಿಸಿ ನೊಂದ ವಿದ್ಯಾರ್ಥಿ ಮಳವಳ್ಳಿಯ ಎ.ಎಸ್. ನಂದೀಶ ಪತ್ರ ಬರೆದಿರುವುದಾಗಿ ತಿಳಿಸಿದರು.

ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ, ವಿದ್ಯಾರ್ಥಿಗಳನ್ನು ಶಿಕ್ಷೆಗೆ ಗುರಿ ಪಡಿಸುವುದು ಯಾವ ನ್ಯಾಯ? ಸರ್ಕಾರ ಕೂಡಲೇ ಯುಜಿಸಿ ಮಾನ್ಯತೆ ಕೊಡಿಸಲು ಪ್ರಯತ್ನಿಸಬೇಕೆಂದು ಪತ್ರದಲ್ಲಿ ಮನವಿ ಮಾಡಲಾಗಿದೆ ಎಂದು ಬುಧವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ರದ್ದತಿ ಹಿನ್ನೆಲೆ.  ವಿದ್ಯಾರ್ಜನೆ ಮಾಡಬೇಕಾದ ವಿದ್ಯಾರ್ಥಿಗಳು ಸಾವು ಬೇಡುವ ಸ್ಥಿತಿಗೆ ತಂದಿಟ್ಟ ಕೆ.ಎಸ್.ಓ.ಯು. ದಯಾ ಮರಣ ಕೋರಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮುಕ್ತ ವಿವಿ ವಿದ್ಯಾರ್ಥಿ ಎ.ಎಸ್.ನಂದೀಶ್ ಮನವಿ.  ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕೆ.ಅಣ್ಣಹಳ್ಳಿ ನಿವಾಸಿ.  2014ರಲ್ಲಿ ಪ್ರಥಮ ಎಂ.ಎ. ಅರ್ಥಶಾಸ್ತ್ರ ವಿಷಯಕ್ಕೆ ಪ್ರವೇಶ ಪಡೆದಿದ್ದ ನಂದೀಶ್. 2015-16ನೇ ಸಾಲಿನಲ್ಲಿ ದ್ವಿತೀಯ ಎಂ.ಎ.ಗೂ ಪ್ರವೇಶ ಪಡೆದಿದ್ದ‌. 2013ರಿಂದ ಅನ್ವಯವಾಗುವಂತೆ ಯುಜಿಸಿ ಮಾನ್ಯತೆ ರದ್ದಾದ ಹಿನ್ನೆಲೆಯಲ್ಲಿ ದಯಾಮರಣಕ್ಕೆ ಮನವಿ ಮಾಡಿದ್ದಾರೆ.

ಯೂನಿವರ್ಸಿಟಿ ಗ್ರ್ಯಾಂಟ್ ಕಮಿಷನ್ (UGC) ಏಕಾಏಕಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ರದ್ದುಪಡಿಸಿದ ಹಿನ್ನೆಲೆಯಲ್ಲಿ ಹತಾಶೆಗೊಂಡಿರುವ ನೊಂದ ವಿದ್ಯಾರ್ಥಿ ನಂದೀಶ್ `ದಯಾಮರಣ’ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿರುವುದು ಇತಿಹಾಸದಲ್ಲಿಯೇ ಪ್ರಥಮವಾಗಿದೆ.

ಮಾಹಿತಿ : ಕೆ.ಎಸ್.ಓ.ಯು ವೆಬ್ ಸೈಟ್ ನಲ್ಲಿ ಪ್ರಕಟವಾಗಿದ್ದ ಜಾಹಿರಾತು ನೋಡಿ 2014 ರಲ್ಲಿ ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಿ ಸೇರ್ಪಡೆಯಾದೆ. ಈ ವೇಳೆ ಎಂ.ಜೆ.ಕೃಷ್ಣನ್ ಅವರು ಮುಕ್ತ ವಿವಿಯ ಕುಲಪತಿಯಾಗಿದ್ದರು. ಬಳಿಕ 2015 ರಲ್ಲಿ ಪ್ರಥಮ ವರ್ಷದ ತರಗತಿಯನ್ನು ತೇರ್ಗಡೆಹೊಂದಿದೆ. ಜತೆಗೆ ಇದೇ ವೇಳೆ ಉಪನ್ಯಾಸಕ ಹುದ್ದೆಗೆ ಅರ್ಹತೆ ಹೊಂದುವ ಸಲುವಾಗಿ ಕೆ-ಸೆಟ್ ಪರೀಕ್ಷೆಯೂ ತೇರ್ಗಡೆ ಹೊಂದಿದ್ದೇನೆ. ಆದರೆ ದುರಾದೃಷ್ಠವಶಾತ್, ಯುಜಿಸಿ, 2013 ರ ನಂತರದ ಕೆಎಸ್ ಒಯು ಮಾನ್ಯತೆಯನ್ನು ರದ್ದು ಪಡಿಸಿತು. ಇದಾದ ಬಳಿಕ ಯಾವುದೇ ಹುದ್ದೆಗೂ ನಮ್ಮ ಅರ್ಜಿಯನ್ನು ಸರಕಾರ ಪರಿಗಣಿಸುತ್ತಿಲ್ಲ, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸಾಯುವ ನಿರ್ಧಾರಕ್ಕೆ ಬಂದಿದ್ದೇನೆ. ಆದ್ದರಿಂದಲೇ ರಾಷ್ಟ್ರಪತಿಗೆ ಪತ್ರ ಬರೆದು ದಯಾಮರಣಕ್ಕೆ ಅವಕಾಶ ಕೋರಿದ್ದೇನೆ ಎಂದು ಸ್ಪಷ್ಟಪಡಿಸಿದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: