ಕರ್ನಾಟಕಮೈಸೂರು

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರತ್ಯೇಕ ಧರ್ಮಕ್ಕೆ ಹೋರಾಡಿ : ಎಂ.ಬಿ.ಪಾಟೀಲ್ ಮತ್ತು ವಿನಯ್ ಕುಲಕರ್ಣಿಗೆ ಆಗ್ರಹ

ಮೈಸೂರು,ಅ.11 : ರಾಜಕೀಯ ಲಾಭಕ್ಕಾಗಿ ವೀರಶೈವ ಲಿಂಗಾಯತ ಧರ್ಮಿಯರನ್ನು ಇಬ್ಭಾಗ ಮಾಡುವ ಹುನ್ನಾರ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯನವರಿಗೆ ಸಣ್ಣ ಕಾನೂನಿನ ಅರಿವಿಲ್ಲವೇ ಎಂದು ನ್ಯಾಯವಾದಿ ಹೆಚ್.ಎಸ್.ಮಲ್ಲಿಕಾರ್ಜುನಸ್ವಾಮಿ ಪ್ರಶ್ನಿಸಿದರು.

ಕಾನೂನು ವಿದ್ಯಾರ್ಥಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೊಸ ಧರ್ಮ ಸ್ಥಾಪನೆಗೆ ಸಂವಿಧಾನದಲ್ಲಿ ಅವಕಾಶವಿಲ್ಲವೆಂದು ತಿಳಿದಿದೆ, ಹೀಗಿದ್ದರೂ ಕುತಂತ್ರ ಬಳಸಿ ಒಗ್ಗಟ್ಟಾಗಿರುವ ವೀರಶೈವ ಲಿಂಗಾಯಿತ ಸಮುದಾಯವನ್ನು ಒಡೆಯುವ ಹುನ್ನಾರವನ್ನು ಸಚಿವರಾದ ಎಂ.ಬಿ.ಪಾಟೀಲ್ ಮತ್ತು ವಿನಯ್ ಕುಲಕರ್ಣಿಯವರು ನಡೆಸುತ್ತಿರುವುದು ಕೇವಲ ಮತಬ್ಯಾಂಕ್ ಗಾಗಿ ಎಂದು ಬುಧವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಸವಣ್ಣನವರ ತತ್ವ ಸಿದ್ಧಾಂತಗಳ ವಿರುದ್ಧ ಮಾತನಾಡುವ ನೈತಿಕತೆ ಮಾತೆ ಮಹದೇವಿಯವರಿಗೆ ಇಲ್ಲ, ವೀರಶೈವ ಧರ್ಮದಲ್ಲಿಯೇ ಹುಟ್ಟಿ ಧರ್ಮ ದ್ರೋಹ ಕೆಲಸ ಮಾಡುತ್ತಿರುವ ಸಚಿವರು ವೀರಶೈವ ಲಿಂಗಾಯಿತ ಪದಗಳಲ್ಲಿ ಯಾವ ವ್ಯತ್ಯಾಸವಿದೆ. ಈ ಬಗ್ಗೆ ದಾಖಲೆಗಳಿದ್ದಾರೆ ಬಿಡುಗಡೆಗೊಳಿಸಲಿ ಎಂದು ಸಚಿವರ ನಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈಗೊಂಬೆಯಂತೆ ರಾಜಕೀಯ ದೊಂಬರಾಟ ನಡೆಸುತ್ತಿರುವ ಸಚಿವದ್ವಯರು ಹಾಗೂ ಮಾತೆ ಮಹದೇವಿಯವರು ಸಮಾಜಕ್ಕಾಗಿ ಯಾವ ಕೊಡುಗೆಯನ್ನು ನೀಡಿಲ್ಲ, ಸಚಿವರು, ಜನಪ್ರತಿನಿಧಿಗಳು ಜಾತ್ಯಾತೀತರಾಗಬೇಕೆ ಹೊರತು ಜಾತಿ ರಾಜಕಾರಣ ತರವಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ. ಲಿಂಗಾಯತ ಸಮುದಾಯದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಹಾಗೂ ವೀರ ಯೋದ ಹನುಮಂತಪ್ಪ ಕೊಪ್ಪದ್ ಅವರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ರಾಜಕೀಯ ನಡೆಸಿದರು, ಅವರ ಕುಟುಂಬಗಳಿಗೆ ಬೆಂಬಲವಾಗಿರಬೇಕಿದ್ದ ಸಚಿವರು ಅಂದು ಮೌನ ವಹಿಸಿದ್ದು, ಇಂದು ಚುನಾವಣಾ ರಾಜಕಾರಣ ನಡೆಸುತ್ತಿದ್ದಾರೆ. ಲಿಂಗಾಯಿತರ ಬಗ್ಗೆ ನೈಜ ಕಾಳಜಿ ಸಚಿವರಿಗಿದ್ದರೆ ತಮ್ಮ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಡಲಿ, ಅದರ ಹೊರತಾಗಿ ಮತಗಳಿಗಾಗಿ ಧರ್ಮವನ್ನು ಒಡೆಯಬಾರದು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎನ್ನುವ ಎಚ್ಚರಿಕೆ ನೀಡಿದರು.

ಅಖಿಲ ಭಾರತ ವೀರಶೈವ ಮಹಾಸಭಾಗೆ ಈಗಾಗಲೇ 4 ಬಾರಿ ಪತ್ರ ಬರೆದು ಕಾನೂನಿನ ಅರಿವು ಮೂಡಿಸಲಾಗಿದ್ದು ಮುಂದಿನ ದಿನಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವೆ, ಈಗಲಾದರು ಧರ್ಮ ವಿಭಜನತೆ ಕಾರ್ಯವನ್ನು ನಿಲ್ಲಿಸಿ, ಇಲ್ಲವಾದರೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವರು ಎಂದು ಸರ್ಕಾರಕ್ಕೆ  ನೇರ ಸಂದೇಶ ರವಾನಿಸಿದರು.

ಸುದ್ದಿಗೋಷ್ಠಿಯಲ್ಲಿ ಎನ್.ಸಿ.ಶಿವಾನಂದ ಸ್ವಾಮಿ ಹಾಗೂ ಕೆ.ರವಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: