ಮೈಸೂರು

ಆಯುರ್ವೇದ ವೈದ್ಯಕೀಯ ಚಿಕಿತ್ಸೆ ಕುರಿತು ಜಾಗೃತಿ

ಮೈಸೂರು, ಅ.೧೧: ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಮತ್ತು ಸರ್ಕಾರಿ ಆಯುರ್ವೇದ ಕಾಲೇಜಿನ ಜಂಟಿ ಆಶ್ರಯದಲ್ಲಿ ಅ.೧೭ರಂದು ಆಚರಿಸಲಾಗುವ ರಾಷ್ಟ್ರೀಯ ಅಯುರ್ವೇದ ದಿನದ ಅಂಗವಾಗಿ ವಿಜಯ ವಿಠಲ ಕಾಲೇಜಿನಲ್ಲಿ ಆಯುರ್ವೇದ ವೈದ್ಯಕೀಯ ಚಿಕಿತ್ಸೆ ಮತ್ತು ಮನೆ ಔಷಧಿ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಖ್ಯಾತ ಆಯುರ್ವೇದ ವೈದ್ಯ ಡಾ. ಚಂದ್ರಶೇಖರ್ ಆಯುರ್ವೇದ ವೈದ್ಯಕೀಯ ಚಿಕಿತ್ಸೆ ಮತ್ತು ರೋಗನಿವಾರಣೆಗಾಗಿ ಮನೆ ಮದ್ದು ಎಂಬ ವಿಷಯವನ್ನು ಕುರಿತು ವಿದ್ಯಾರ್ಥಿಗಳನ್ನು ಉzಶಿಸಿ ಮಾತನಾಡಿದರು. ಆಯುರ್ವೇದ ಭಾರತೀಯ ವೈದ್ಯಪದ್ದತಿಯಾಗಿದ್ದು, ಸಕಲ ರೋಗಗಳಿಗೂ ಮನೆಯಲ್ಲಿ ಔಷಧಿ ಪಡೆಯಬಹುದು. ವಿಶ್ವಕ್ಕೆ ಆಯುರ್ವೇದದ ಮಹತ್ವವನ್ನು ಭಾರತ ಸಾರಿದ್ದು ಇದರ ಮಹತ್ವವನ್ನು ಇಂದಿನ ಯುವ ಪೀಳಿಗೆ ಅರಿತುಕೊಳ್ಳಬೇಕು. ಇಂಗ್ಲಿಷ್ ಔಷಧಿಗೆ ಮಾರುಹೋಗದೆ ಮನೆಯಲ್ಲಿ ಔಷಧಿ ತಯಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಗೋಪಿನಾಥ್, ಸಹಾಯಕ ನಿರ್ದೇಶಕ ಡಾ.ಎಲ್.ಎಂ. ಶೆಣೈ, ಡಾ. ಮಧುಮತಿ, ಡಾ. ರಾಧಾಕೃಷ್ಣ, ಡಾ. ಕೆರೋಲಿನ್, ಡಾ.ದೀಪಾ, ಡಾ. ಸುಮ, ಡಾ. ಸುಪ್ರೀತಾ ಮತ್ತು ವಿಜಯ ವಿಠಲ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: