ಪ್ರಮುಖ ಸುದ್ದಿ

ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ: ಇಬ್ಬರು ಪೊಲೀಸರ ಬಂಧನ

ಪ್ರಮುಖ ಸುದ್ದಿ, ಶ್ರೀನಗರ, ಅ.೧೧: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನ ಕೃತ್ಯವೆಸಗಲು ಹಿಜ್‌ಬುಲ್ ಮುಜಾಯಿದ್ದೀನ್ ಉಗ್ರರಿಗೆ ಶಸ್ತ್ರಾಸ್ತ್ರ ಮತ್ತು ನೆರವು ನೀಡಿದ ಆರೋಪದಡಿಯಲ್ಲಿ ಇಬ್ಬರು ಪೊಲೀಸರ ಸಹಿತ ಮೂವರನ್ನು ಶೋಪಿಯಾನ್‌ನಲ್ಲಿ ಬಂಧಿಸಲಾಗಿದೆ.
ಬಂಧಿತರ ಪೈಕಿ ಮೂರನೇ ವ್ಯಕ್ತಿ ಉಗ್ರ ಚಟುವಟಿಕೆಯ ತಳ ಮಟ್ಟದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದವನಾಗಿದ್ದು, ಅದೀಲ್ ಅಹಮದ್ ನಿಗ್ರೂ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ನಿಗ್ರೂನನ್ನು ತೀವ್ರ ವಿಚಾರಣೆ ನಡೆಸಿದ ವೇಳೆ ಆಂಶಿಪೋರಾದ ಕಾನ್ಸ್‌ಟೇಬಲ್ ಶಬೀರ್ ಅಹಮದ್ ಮಲೀಕ್‌ನಿಂದ ಎಕೆ ೪೭ ಪಡೆದಿರುವುದಾಗಿ, ಇನ್ನೊಂದನ್ನು ಕಾನ್ಸ್‌ಟೇಬಲ್ ನಾಜೀರ್ ಅಹಮದ್ ನಾಜರ್‌ನಿಂದ ಪಡೆದಿರುವುದಾಗಿ ಬಾಯ್ಬಿಟ್ಟಿದ್ದಾನೆ. ತಕ್ಷಣ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: