ಮನರಂಜನೆ

ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪವರ್ ಸ್ಟಾರ್ ಪುನೀತ್.!

ಬೆಂಗಳೂರು,ಅ.11-ಕನ್ನಡದ ಪ್ರಸಿದ್ಧ ಚಾನೆಲ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಹೊಸದೊಂದು ಟಾಕ್ ಶೋ ಬರಲಿದ್ದು, ಅದನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡಲಿದ್ದಾರೆ. ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಕಾರ್ಯಕ್ರಮಕ್ಕಾಗಿ ಅವರ ಅಭಿಮಾನಿಗಳು ಮಾತ್ರವಲ್ಲ ಸ್ವತಃ ಪುನೀತ್ ಅವರೇ ಕಾತುರದಿಂದ ಕಾಯುತ್ತಿದ್ದಾರೆ.
ಹೌದು, ಪುನೀತ್ ನಡೆಸಿಕೊಡುವ ಕಾರ್ಯಕ್ರಮದ ಬಗ್ಗೆ ಹೀಗೆ ಮಾತನಾಡಿದ್ದಾರೆ. ನಾಲ್ಕು ವರ್ಷದ ಬಳಿಕ ಟಿವ ಶೋ ನಡೆಸಿಕೊಡಲು ಅವಕಾಶ ಸಿಕ್ಕಿರುವುದು ಖುಷಿಯಾಗಿದೆ. ಯಾವ ರೀತಿ ನಾನು ಕಾರ್ಯಕ್ರಮ ನಡೆಸಿಕೊಂಡು ಹೋಗಬಹುದು ಎಂಬ ಕುತೂಹಲ ನನಗೂ ಇದೆ. ನನಗೆ ಟಿವಿ ಕಾರ್ಯಕ್ರಮ ಮಾಡಿದಾಗ ಸಿಗುವಂತಹ ಖುಷಿ ಏನಪ್ಪಾ ಅಂದ್ರೆ, ಪ್ರತಿ ಸಲ ಶೋ ಮಾಡಿದಾಗಲೂ, ಅಲ್ಲಿಗೆ ಬರುವಂತಹ ಸ್ಪರ್ಧಿಗಳು, ಅತಿಥಿಗಳು ಹೇಗಿರ್ತಾರೆ, ಅವರನ್ನ ನಾನು ಹೇಗೆ ಮಾತಾಡಿಸುತ್ತೇನೆ, ನನ್ನ ಜೊತೆ ಅವರು ಎಷ್ಟರ ಮಟ್ಟಿಗೆ ಮಾತನಾಡುತ್ತಾರೆ, ಅವರನ್ನ ಹೇಗೆ ಕಂಫರ್ಟ್ ಆಗಿ ಇರಿಸಿಕೊಳ್ಳಬಹುದು ಎಂಬ ಥ್ರಿಲ್ ನನಗಿದೆ. ಇದೊಂದು ಫ್ಯಾಮಿಲಿ ಶೋ ಆಗಿರವುದರಿಂದ ”ನಮ್ಮ ಬಾಲ್ಯದ ನೆನಪು ನೆನಪಾಗುತ್ತೆ. ಒಂದು ಫ್ಯಾಮಿಲಿ ಅಂದ್ರೆ, ಅಜ್ಜ, ಅಜ್ಜಿ, ದೊಡ್ಡಪ್ಪ, ಚಿಕ್ಕಪ್ಪ, ಅಣ್ಣ, ತಮ್ಮ, ಮಕ್ಕಳು ಹೀಗೆ ಎಲ್ಲರೂ ಒಟ್ಟಿಗೆ ಇರುವ ಫ್ಯಾಮಿಲಿ ಜೊತೆ ಒಂದು ಸಂವಾದ. ಇದೇ ಈ ಕಾರ್ಯಕ್ರಮ ಪರಿಕಲ್ಪನೆ ಎಂದಿದ್ದಾರೆ.
ಸದ್ಯ, ಪುನೀತ್ ನಡೆಸಿಕೊಡಲಿರುವ ಹೊಸ ಶೋದ ಪ್ರೋಮೋ ಮತ್ತು ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು, ಟಿವಿ ಪ್ರೇಕ್ಷಕರು ಫುಲ್ ಖುಷಿಯಾಗಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದ್ದು, ಸದ್ಯಕ್ಕೆ ಸಮಯ ಹಾಗೂ ದಿನಾಂಕ ನಿಗದಿಯಾಗಿಲ್ಲ. (ವರದಿ-ಎಂ.ಎನ್)

Leave a Reply

comments

Related Articles

error: