ದೇಶಪ್ರಮುಖ ಸುದ್ದಿ

ಎಫ್ ಟಿ ಐಐ ಅಧ್ಯಕ್ಷರಾಗಿ ಅನುಪಮ್ ಖೇರ್ ಆಯ್ಕೆ

ದೇಶ(ನವದೆಹಲಿ)ಅ.11:- ಬಾಲಿವುಡ್ ನ ಹಿರಿಯ ನಟ-ನಿರ್ದೇಶಕ ಅನುಪಮ್ ಖೇರ್ ಅವರನ್ನು ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸಟಿಟ್ಯೂಟ್ ನ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಗಜೇಂದ್ರ ಚೌವ್ಹಾಣ್ ಅವರ ಜಾಗಕ್ಕೆ ಅನುಪಮ್ ಖೇರ್ ಅವರನ್ನು ಚುನಾಯಿಸಲಾಗಿದೆ.  ನನ್ನನ್ನು ತೆಗೆದುಹಾಕಿಲ್ಲ. ಮಾರ್ಚ್ ನಲ್ಲಿಯೇ ನನ್ನ ಅಧಿಕಾರಾವಧಿ ಪೂರ್ಣಗೊಂಡಿದೆ ಎಂದು ಗಜೇಂದ್ರ ತಿಳಿಸಿದ್ದಾರೆ. 2015ರಲ್ಲಿಯೇ ಗಜೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಕ್ಯಾಂಪಸ್ ನಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದಿತ್ತು. ಬಿಜೆಪಿ ಸರ್ಕಾರ ಅವರನ್ನು ತೆಗೆದುಹಾಕಲು ನಿರಾಕರಿಸಿತ್ತು. 139 ದಿನಗಳ ಕಾಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ಕೆಲವರು ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದರು. ಪುಣೆಯಿಂದ ದೆಹಲಿಯ ಜಂತರ್ ಮಂತರ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಆದರೂ ಸರ್ಕಾರ ತನ್ನ ತೀರ್ಮಾನವನ್ನು ಹಿಂದೆಗೆದುಕೊಂಡಿರಲಿಲ್ಲ. ಅಧ್ಯಕ್ಷರ ಕಾಲಾವಧಿ ಮೂರು ವರ್ಷದ್ದಾಗಿರುತ್ತದೆ. (ಎಸ್.ಎಚ್)

Leave a Reply

comments

Related Articles

error: