ಕರ್ನಾಟಕ

ಸೋಮವಾರಪೇಟೆ ಪಟ್ಟಣದಲ್ಲಿ ನಡೆದ ಗಲಾಟೆಗೂ, ಪಟ್ಟಣದಲ್ಲಿ ನಡೆದ ಓಣಂ ಉತ್ಸವ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ : ವಿ.ಎಂ. ವಿಜಯ

ರಾಜ್ಯ(ಮಡಿಕೇರಿ)ಅ.11:- ಅ.8ರಂದು ಸೋಮವಾರಪೇಟೆ ಪಟ್ಟಣದಲ್ಲಿ ನಡೆದ ಗಲಾಟೆಗೂ, ಪಟ್ಟಣದಲ್ಲಿ ನಡೆದ ಓಣಂ ಉತ್ಸವ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಾಲೂಕು ಹಿಂದು ಮಲೆಯಾಳ ಸಮಾಜದ ಸಲಹೆಗಾರ ವಿ.ಎಂ. ವಿಜಯ ಹೇಳಿದ್ದಾರೆ.

ಸೋಮವಾರಪೇಟೆಯಲ್ಲಿ ಓಣಂ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿದ್ದೇವೆ. ಮೆರವಣಿಗೆ ಸಂದರ್ಭವೂ ಸಹ ಯಾರಿಗೂ ತೊಂದರೆ ನೀಡಿಲ್ಲ. ಕಾರ್ಯಕ್ರಮಕ್ಕೆ ಎಲ್ಲಾ ಜನಾಂಗ ಹಾಗೂ ರಾಜಕೀಯ ಪಕ್ಷಗಳ ಮುಖಂಡರೂ ಆಗಮಿಸಿದ್ದರು. ಯಾವ ಜನಾಂಗವನ್ನೂ ನಿಂದಿಸಿಲ್ಲ. ಶಾಂತಿ ಸೌಹಾರ್ದತೆಯ ಸಂದೇಶ ಸಾರಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆದರೆ ಕೆಲವೊಂದು ಸಂಘಟನೆಯವರು ಪೊಲೀಸರಿಗೆ ನೀಡಿದ ಮನವಿಯಲ್ಲಿ ಹೊರ ರಾಜ್ಯದಿಂದ ಬಂದ ಸಮಾಜಘಾತುಕ ಶಕ್ತಿಗಳು ಎಂದು ಉಲ್ಲೇಖಿಸಿದ್ದಾರೆ. ಸಮಾಜಘಾತುಕ ಶಕ್ತಿಗಳು ಯಾರು ಎಂಬದನ್ನು ಸ್ಪಷ್ಟಪಡಿಸಲಿ. ವಿ.ಎಂ. ವಿಜಯ ಒತ್ತಾಯಿಸಿದರು.

8ರಂದು ಒಕ್ಕಲಿಗ ಸಮುದಾಯ ಭವನದಲ್ಲಿ ನಮ್ಮ ಓಣಂ ಕಾರ್ಯಕ್ರಮ ಸಂಜೆ 7 ಗಂಟೆಗೆ ಮುಕ್ತಾಯಗೊಂಡಿದೆ. ರಾತ್ರಿ 11 ಗಂಟೆಯಲ್ಲಿ ಪಟ್ಟಣದಲ್ಲಿ ಗಲಾಟೆ ಸಂಭವಿಸಿದರೆ ಸಂಘಟನೆಯನ್ನು ಎಳೆಯೋದು ಯಾಕೆ, ಆರೋಪ ಮಾಡುವವರು ಸಮಾಜಕ್ಕೆ ಎಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂಬದು ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು.

ಹಿಂದು ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಡಿ. ಪ್ರಕಾಶ್, ಕಾರ್ಯದರ್ಶಿ ಅಯ್ಯಪ್ಪ, ಸಮಾಜದ ಸಂಘಟನಾ ಕಾರ್ಯದರ್ಶಿ ಗಂಗಾಧರ್, ಸಲಹೆಗಾರ ಐಗೂರು ಪ್ರಭಾಕರ್ ಅವರುಗಳು ಇದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: