
ಕರ್ನಾಟಕ
ರಾಜ್ಯ ಸರ್ಕಾರದಿಂದ ಹಿಂದು ವಿರೋಧಿ ಧೋರಣೆ : ಪ್ರತಿಭಟನೆ
ರಾಜ್ಯ(ಮಡಿಕೇರಿ)ಅ.11:- ರಾಜ್ಯ ಸರ್ಕಾರ ಹಿಂದು ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ತಾಲೂಕು ಹಿಂದು ಜಾಗರಣಾ ವೇದಿಕೆ ಮತ್ತು ವಿಶ್ವಹಿಂದು ಪರಿಷತ್ ನೇತೃತ್ವದಲ್ಲಿ ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯ ಸರ್ಕಾರರ ವಿರುದ್ಧ ಘೋಷಣೆ ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಮಂತ್ರಿ ರಮಾನಾಥ ರೈ, ಸಚಿವರುಗಳಾದ ಯು.ಟಿ.ಖಾದರ್, ಕೆ.ಜೆ.ಜಾರ್ಜ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ನಂತರ ತಹಸೀಲ್ದಾರ ಮಹೇಶ್ ಅವರ ಮೂಲಕ ರಾಜ್ಯಪಾಲರಿಗೆ ಸರ್ಕಾರದ ವಿರುದ್ಧ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ತಿಮ್ಮಯ್ಯ, ಧರ್ಮ ಜಾಗರಣಾ ಸಂಚಾಲಕ ಸಿ.ಪಿ.ಗೋಪಾಲ್, ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಬಿ.ಜೆ.ದೀಪಕ್, ಪ್ರಮುಖರಾದ ಕರ್ಕಳ್ಳಿ ರವಿ, ಉಮೇಶ್, ಮಹೇಶ್ ತಿಮ್ಮಯ್ಯ, ಶಶಿಕಾಂತ್ ಇದ್ದರು. (ಕೆಸಿಐ,ಎಸ್.ಎಚ್)