ಪ್ರಮುಖ ಸುದ್ದಿಮೈಸೂರು

ಜೈ ಭಜರಂಗಿ ಯುವಕರಿಗೆ ರೈಫಲ್ ತರಬೇತಿ: ರಾಮದಾಸ್

ಜೈ ಭಜರಂಗಿ ಯುವ ಸೇನಾ ವತಿಯಿಂದ ಮೈಸೂರಿನ ಲಷ್ಕರ್ ಮೊಹಲ್ಲಾದ ಬೂದುಗುಂಟೆ ಕಲ್ಯಾಣ ಮಂಟಪದಲ್ಲಿ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ದೇಶದ ಸೈನಿಕರಿಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ,  ಜೈ ಜವಾನ್ ಎಂಬ ಘೋಷವಾಕ್ಯದೊಂದಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಗಣ್ಯರು ಜೈ ಜವಾನ್ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದರು. ಹಿರಿಯ ವಕೀಲ ಸಿ.ವಿ. ಕೇಶವ್ ಮೂರ್ತಿ ಅವರು ಮಾತನಾಡಿ, ಇತಿಹಾಸದ ಪುಟಗಳಲ್ಲಿ ಸೇರಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು. ಸೇನೆಗೆ ಸೇರಿದವರಲ್ಲಿ ಕೊಡವರು, ಬೆಳಗಾವಿಯವರು ಹೆಚ್ಚಿದ್ದಾರೆ. ದೇಶದ ಕೊಡುಗೆಯಲ್ಲಿ ಸೈನಿಕರ ಪಾತ್ರ ಅಪಾರವಾಗಿದ್ದು, ಇತ್ತೀಚಿಗೆ ನಡೆದ ಪಾಕ್ ಆಕ್ರಮಣಕ್ಕೆ ನಮ್ಮ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ಇಂದು ಹೆಣ್ಣು ಮಕ್ಕಳು ಕೂಡ ಸೇನೆಗೆ ಸೇರುತ್ತಿದ್ದು, ಮಕ್ಕಳನ್ನು ಸೈನ್ಯಕ್ಕೆ ಸೇರಿಸುವಲ್ಲಿ ತಾಯಂದಿರ ಪಾತ್ರ ದೊಡ್ಡದು. ಸೈನಿಕರು ಸಂಬಳಕ್ಕಾಗಿ ಕೆಲಸ ಮಾಡೋದಿಲ್ಲ. ದೇಶ ರಕ್ಷಣೆಗಾಗಿ ಕೆಲಸ ಮಾಡ್ತಾರೆ. ನಮ್ಮ‌ ಜನರು ಸೈನಿಕರಿಗೆ ಮತ್ತಷ್ಟು ಸ್ಫೂರ್ತಿ ನೀಡಬೇಕು ಎಂದರು.

ಮಾಜಿ ಸಚಿವ ಎಸ್‍.ಎ. ರಾಮದಾಸ್ ಮಾತನಾಡಿ, ಈ ಕಾರ್ಯಕ್ರಮವನ್ನು ನೋಡಿದ ಬಳಿಕ ನನಗೂ ಸೈನಿಕನಾಗಬೇಕೆಂದು ಅನಿಸುತ್ತಿದೆ. ಮಾತೆಯರು ತಮ್ಮ ಮಕ್ಕಳನ್ನು ವೀರ ಯೋಧರನ್ನಾಗಿ ಮಾಡಬೇಕು. ಯುವಕರು ಸೈನ್ಯಕ್ಕೆ ಸೇರಲು ಮುಂದೆ ಬರಬೇಕು ಎಂದರು. ನಿರುದ್ಯೋಗಿ ಯುವಕರಿಗೆ ಕಂಪನಿಗಳಲ್ಲಿ ನಿಸ್ವಾರ್ಥವಾಗಿ ಕೆಲಸ ಕೊಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಇದೇ ಸಂದರ್ಭ ತಿಳಿಸಿದರು.

ಪಿರಿಯಾಪಟ್ಟಣದಲ್ಲಿ ಬಿಜೆಪಿ ಮುಖಂಡನ ಹತ್ಯೆಗೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಚಿವ ರಾಮದಾಸ್ ಅವರು, ಹಣಕ್ಕಾಗಿ ಹೊರಗಿನಿಂದ ಬಂದವರು ಇಲ್ಲಿನ ಮಾಹಿತಿಯನ್ನು ಆತಂಕವಾದಿಗಳಿಗೆ ನೀಡುತ್ತಿದ್ದಾರೆ. ಇದು ದೇಶದ ಆಂತರಿಕ ಭದ್ರತೆಗೂ ಕಂಟಕವಾಗಿದೆ. ಹಾಗಾಗಿ ಜೈ ಭಜರಂಗಿ ಯುವಕರಿಗೆ ರೈಫಲ್ ತರಬೇತಿ ನೀಡಲಾಗುವುದೆಂದು ಘೋಷಿಸಿದರು.

ಕೊಡವ ಸಾಹಿತ್ಯ ಸಂಘದ ಮಾಜಿ ಅಧ್ಯಕ್ಷರಾದ ಅದ್ದಂಣ ಕಾರ್ಯಪ್ಪ, ನಿವೃತ್ತ ಯೋಧರಾದ ಹವಾಲ್ದಾರ್ ರಾಮಚಂದ್ರಪ್ಪ, ಯುವ ಬ್ರೀಗೇಡ್ ಮುಖಂಡರಾದ ನಿತ್ಯಾನಂದ ವಿವೇಕವಂಶಿ, ಭಜರಂಗಿ ಯುವ ಸೇನೆಯೆ ಅಧ್ಯಕ್ಷರಾದ ರಾಜನ್, ಕಾರ್ಯಕರ್ತ ಉಮೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

Leave a Reply

comments

Related Articles

error: