ಲೈಫ್ & ಸ್ಟೈಲ್

ಪ್ರತಿದಿನ ಒಂದು ಎಸಳು ಬೆಳ್ಳುಳ್ಳಿ ಸೇವಿಸಿ ರೋಗದಿಂದ ದೂರವಿರಿ

ಸರಿ ಸುಮಾರು ಎಲ್ಲಾ ರೀತಿಯ ಆಹಾರ ತಯಾರಿಕೆಯಲ್ಲೂ ಬೆಳ್ಳುಳ್ಳಿ ಬಳಕೆಯಾಗುತ್ತದೆ. ಆದರೆ ಕೆಲವರಿಗೆ ಬೆಳ್ಳುಳ್ಳಿ ವಾಸನೆ ಇಷ್ಟವಾಗುವುದಿಲ್ಲ. ಅದರಿಂದ ಬೆಳ್ಳುಳ್ಳಿ ಸೇವಿಸಲು ಹಿಂಜರಿಯುತ್ತಾರೆ. ಬೆಳ್ಳುಳ್ಳಿ ಸೇವಿಸಿ ಎಷ್ಟೋ ರೋಗಗಳನ್ನು ದೂರವಿಡಬಹುದು ಅನ್ನುವುದು ಕೆಲವರಿಗೆ ತಿಳಿದಿಲ್ಲ.

ಬೆಳ್ಳುಳ್ಳಿ ಸೇವನೆಯಿಂದ ಈ ಎಲ್ಲ ಲಾಭಗಳನ್ನು ನೀವು ಪಡೆಯಬಹುದು. ಇದರಲ್ಲಿ ಪೊಟ್ಯಾಶಿಯಂ ಹೇರಳ ಪ್ರಮಾಣದಲ್ಲಿದ್ದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಎಸಳು ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಚಯಾಪಚಯಕ್ರಿಯೆ ಸರಾಗವಾಗಿ ನಡೆಯುತ್ತದೆ.

ಇದರಲ್ಲಿರುವ ಎಜೋಯಿನ್ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ. ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವುದರಿಂದ ಮಧುಮೇಹಿಗಳಿಗೆ ಅನುಕೂಲಕರವಾಗಿದೆ. ಇದರಲ್ಲಿರುವ ಸೆಲೆನಿಯಂ ಅಂಶದಿಂದ ಬಂಜೆತನ ನಿವಾರಣೆಯಾಗುತ್ತದೆ. ಥೈರಾಯಿಡ್ ಸಮಸ್ಯೆಯನ್ನು ನಿವಾರಿಸುವ ಗುಣವೂ ಬೆಳ್ಳುಳ್ಳಿಗಿದ್ದು, ಇದರಲ್ಲಿನ ಎಲಿಸಿನ್ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದರಲ್ಲಿ ಎಲಿಯಂ ಸಲ್ಫಾಯಿಡ್ ಅಂಶವಿದ್ದು ಇದು ಕ್ಯಾನ್ಸರ್ ನಿವಾರಕವಾಗಿದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಗಳು ಅಲ್ಜೈಮರ್ ರೋಗವನ್ನು ತಡೆಯುತ್ತದೆ. ಒಟ್ಟಿನಲ್ಲಿ ಬೆಳ್ಳುಳ್ಳಿ ಸರ್ವ ರೀತಿಯಿಂಲೂ ಆರೋಗ್ಯಕ್ಕೆ ಉತ್ತಮವಾಗಿದೆ.

Leave a Reply

comments

Related Articles

error: