ಮೈಸೂರು

ಸಿಎಂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕೆಂದು ಒತ್ತಾಯಿಸಿ ಬಿಜೆಪಿಯಿಂದ ಪ್ರತಿಭಟನೆ

ಮೈಸೂರು,ಅ.12-ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತು ಅವರ ಕುಟುಂಬದವರು ಅಕ್ರಮದಲ್ಲಿ ಭಾಗಿಯಾಗಿರುವುದರ ಬಗ್ಗೆ ದಾಖಲೆಗಳನ್ನು ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಬಿಡುಗಡೆಗೊಳಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ರಾಜೀನಾಮೆ ನೀಡಿ ಆರೋಪದ ಪಾರದರ್ಶಕ ತನಿಖೆಗೆ ಸಹಕರಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ವತಿಯಿಂದ ಗುರುವಾರ ನಗರದ ಗಾಂಧಿವೃತ್ತದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಸಿದ್ದರಾಮಯ್ಯ ಅವರು ಯಾವುದೇ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ಮಾಡಿದರೂ ಯಾರು ಪ್ರಶ್ನಿಸಬಾರದು ಎಂಬ ರೀತಿ ವರ್ತಿಸುತ್ತಿರುವುದು ಖಂಡನೀಯ. ಪುಟ್ಟಸ್ವಾಮಿಯವರು ದಾಖಲೆಗಳನ್ನು ಬಿಡುಗಡೆಗೊಳಿಸಿರುವುದನ್ನು ಸಹಿಸಿಕೊಳ್ಳಲಾಗದೆ ತಮ್ಮ ಹಿಂಬಾಲಕರ ಮೂಲಕ ಪ್ರತಿಭಟನೆ ಮಾಡಿಸುವುದು, ಬೆದರಿಕೆ ಹಾಕುವ ಕೆಲಸ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿಗಳು ಪಾರದರ್ಶಕ ತನಿಖೆಗೆ ಸಹಕರಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟರಮಣಶೆಟ್ಟಿ, ಹಿಂದುಳಿದ ವರ್ಗಗಳ ರಾಜ್ಯಕಾರ್ಯದರ್ಶಿ ಬಿ.ಎಂ.ನಟರಾಜು, ಪರೀಕ್ಷಿತ್ ರಾಜ್ ಅರಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಎಲ್.ನಂಜುಂಡಸ್ವಾಮಿ, ಪಾಪಣ್ಣ, ಪರಶುರಾಮಪ್ಪ, ತೋಟದಪ್ಪ, ಬಸವರಾಜು, ಕಾಪು ಸಿದ್ದಲಿಂಗಸ್ವಾಮಿ, ಕಾಪು ಸಿದ್ದವೀರಪ್ಪ, ಕೆ.ಟಿ.ಗೋಪಾಲರಾವ್, ವರಕೋಡು ಪ್ರಕಾಶ್, ರಾಜೇಂದ್ರ, ಎಂ.ಮಿಥುನ್, ಬಿ.ಎಲ್.ಮಹದೇವಪ್ಪ, ರಘುನಾಯಕ್ ಇತರರು ಹಾಜರಿದ್ದರು. (ವರದಿ-ಎಚ್.ಎನ್, ಎಂ.ಎನ್)

 

Leave a Reply

comments

Related Articles

error: