ಪ್ರಮುಖ ಸುದ್ದಿಮೈಸೂರು

ಅನಧಿಕೃತವಾದ ಮೊಬೈಲ್ ಟವರ್ ಅಳವಡಿಕೆಗೆ ನ್ಯಾಯಾಲಯ ತಡೆಯಾಜ್ಞೆ

ಮೈಸೂರು,ಅ.12:- ಮೈಸೂರು ನಗರಪಾಲಿಕೆ ವ್ಯಾಪ್ತಿಯ ಗೋಕುಲಂ 3ನೇ ಹಂತದ 4ನೇ ಮುಖ್ಯರಸ್ತೆಯಲ್ಲಿ ಅನಧಿಕೃತವಾದ ಮೊಬೈಲ್ ಟವರ್ ಅಳವಡಿಕೆಗೆ ಮೈಸೂರು ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ಆದೇಶ ನೀಡಿದೆ.

ಬಾಪೂಜಿ‌ ಅನಾಥ ಮಕ್ಕಳ ಮನೆ, ದಿವ್ಯಾ ಜ್ಯೋತಿ ಚಾರಿಟಬಲ್ ಟ್ರಸ್ಟ್ ಹಾಗೂ ಲಯನ್ಸ್ ಶಾಲೆಯ ಮಧ್ಯೆ‌ ಭಾಗದಲ್ಲಿ ವೆಂಕಟೇಶಗೌಡ,ನಂ111,4ನೇ ಮುಖ್ಯರಸ್ತೆ, ಗೋಕುಲಂ 3ನೇ ಹಂತಮೈಸೂರು ಇವರು ಅನಧಿಕೃತವಾಗಿ ಮೊಬೈಲ್ ಟವರ್ ನಿರ್ಮಿಸಿದ್ದು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು.  6ಆಂಟೆನಾಗಳಿರುವ ಸುಮಾರು 1500ರಿಂದ 2000ಕೆ.ಜಿ.ತೂಕವಿರಬಹುದಾದ ಮೊಬೈಲ್ ಟವರ್ ಕುಸಿದರೆ ಆಗಬಹುದಾದ ಅನಾಹುತವನ್ನು ಊಹಿಸಲು ಸಾಧ್ಯವಿಲ್ಲ. ಈ ಕುರಿತು ಗೋಕುಲಂ ಮೂರನೇ ಹಂತದ ನಿವಾಸಿಗಳು ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗಳಿಗೆ, ಚೆಸ್ಕಾಂ ಮತ್ತು ಮೈಸೂರು ವಲಯ ಆಯುಕ್ತರು-4ಇವರಿಗೆ ಹಲವು ವರ್ಷಗಳಿಂದ ಮನವಿ ನೀಡಿದ್ದು, ಅವರುಗಳು 3ಬಾರಿ ನೋಟೀಸ್ ನೀಡಿದ್ದರೂ ಕಟ್ಟಡ ಮಾಲಿಕ ಕ್ಯಾರೇ ಎಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ನೆರೆಹೊರೆಯ ನಾಗರಿಕರು ಮುಖ್ಯವಾಗಿ  ಮಹಿಳೆಯರು ಮತ್ತು ಹಿರಿಯ ನಾಗರಿಕರು ಪೀಪಲ್ಸ್ ಲೀಗಲ್ ಫಾರಂ ನ ನಿರ್ದೇಶಕ ಮತ್ತು ವಕೀಲ ಬಾಬುರಾಜ್ ಅವರ ಸಹಾಯದಿಂದ ಮೈಸೂರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಕೋರಿಕೆಗೆ ಸ್ಪಂದಿಸಿದ ನ್ಯಾಯಾಲಯವು ಮೊಬೈಲ್ ಟವರ್ ಕೆಲಸವನ್ನು ಮುಂದುವರಿಸದಂತೆ ನಿನ್ನೆ ತಡೆಯಾಜ್ಞೆ ಆದೇಶವನ್ನು ನೀಡಿದೆ.

ಮೊಬೈಲ್ ಟವರ್ ಅಳವಡಿಸಿರುವ ಮನೆಯ ಮಾಲಕನಲ್ಲದೇ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು,ಜಿಲ್ಲಾಧಿಕಾರಿಗಳು, ವಲಯ ಯುಕ್ತರು, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಚೆಸ್ಕಾಂ ಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಕಾನೂನು ಹೋರಾಟ ನಡೆಸಿದ ಸಾರ್ವಜನಿಕರಿಗೆ ಜಯ ದೊರಕಿದೆ. (ಕೆ.ಎಸ್,ಎಸ್.ಚ್)

Leave a Reply

comments

Related Articles

error: