ಕರ್ನಾಟಕಪ್ರಮುಖ ಸುದ್ದಿ

ಐದು ದಿನಗಳ ಪೆರೋಲ್ ಮುಕ್ತಾಯ: ಪರಪ್ಪನ ಅಗ್ರಹಾರಕ್ಕೆ ವಾಪಸ್ ಆಗಲಿರುವ ಶಶಿಕಲಾ

ಬೆಂಗಳೂರು,ಅ.12-ಅನಾರೋಗ್ಯದಿಂದ ಬಳಲುತ್ತಿರುವ ಪತಿ ನಟರಾಜನ್ ಅವರನ್ನು ನೋಡಲು ಪೆರೋಲ್ ಪಡೆದು ಚೆನ್ನೈಗೆ ತೆರಳಿದ್ದ ಶಶಿಕಲಾ ನಟರಾಜನ್ ಇಂದು ಪೆರೋಲ್ ಮುಗಿಸಿ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.

ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಖೈದಿಯಾಗಿದ್ದ ಶಶಿಕಲಾ ನಟರಾಜನ್ ಅವರು ಪತಿ ನಟರಾಜನ್ ಅವರನ್ನು ನೋಡಲು ಅ.6 ರಂದು ಪೆರೋಲ್ ಪಡೆದು ಚೆನ್ನೈಗೆ ತೆರಳಿದ್ದರು. ಇಂದಿಗೆ ಶಶಿಕಲಾ ನಟರಾಜನ್ ಅವರ ಪೆರೋಲ್ ಮುಗಿಯುವ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಯೊಳಗೆ ಶಶಿಕಲಾ ಪರಪ್ಪನ ಅಗ್ರಹಾರಕ್ಕೆ ವಾಪಸಾಗಬೇಕಿದೆ.

ಪೆರೋಲ್ ಪಡೆದಿದ್ದ ಶಶಿಕಲಾ ಅವರಿಗೆ ತಮ್ಮ ಪತಿ ನಟರಾಜನ್ ಆರೋಗ್ಯ ವಿಚಾರಿಸುವುದರ ಹೊರತಾಗಿ ಯಾವುದೇ ಪಕ್ಷದ ಚಟುವಟಿಕೆ, ಸಭೆ, ಸಮಾಲೋಚನೆ ಮತ್ತು ಮಾಧ್ಯಮಗಳೊಂದಿಗೆ ಮಾತನಾಡುವಂತಿಲ್ಲವೆಂದು ಷರತ್ತು ವಿಧಿಸಲಾಗಿತ್ತು.

ಅದರಂತೆ ಶಶಿಕಲಾ ಐದು ದಿನ ಮನೆಯಿಂದ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ತಮ್ಮನ್ನು ನೋಡಲು ಬರುತ್ತಿದ್ದ ಬೆಂಬಲಿಗರತ್ತ ಕೈ ಬೀಸಿ ನಮಸ್ಕರಿಸುತ್ತಿದ್ದರು. (ವರದಿ-ಎಂ.ಎನ್)

 

Leave a Reply

comments

Related Articles

error: