ಮನರಂಜನೆ

ಮನೋವೈದ್ಯರ ಮೊರೆಹೋದ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ.!

ಮುಂಬೈ,ಅ.12-ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಪದ್ಮಾವತಿ ಚಿತ್ರಕ್ಕಾಗಿ ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸಾಕಷ್ಟು ಶ್ರಮವಹಿಸಿದ್ದಾರೆ. ಚಿತ್ರ ಅದ್ಭುತವಾಗಿ ಮೂಡಿ ಬರಬೇಕೆಂದು ಕಲಾವಿದರು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಮನೋಘವಾಗಿ ಅಭಿನಯಿಸಿದ್ದಾರೆ. ಆದರೆ ಈಗ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ್ದರಿಂದ ಮನೋವೈದ್ಯರನ್ನು ಸಂಪರ್ಕಿಸುವಂತಾಗಿದೆ.

ಹೌದು, ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ್ದ ಇವರು ಸಿನಿಮಾ ಮುಗಿದ ಬಳಿಕ ಪಾತ್ರದಿಂದ ಹೊರಬರಲಾರದೆ ಮನೋವೈದ್ಯರನ್ನು ಸಂಪರ್ಕಿಸಿದ್ದಾರೆ. ಅಲ್ಲಾವುದ್ಧೀನ್ ಖಿಲ್ಜಿ ಪಾತ್ರದಲ್ಲಿ ರಣವೀರ್ ಸಿಂಗ್, ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ್ದಾರೆ. ಒಂದು ವರ್ಷ ಕಾಲ ಖಿಲ್ಜಿ ಪಾತ್ರದಲ್ಲೇ ಇದ್ದ ರಣವೀರ್ ವರ್ತನೆ ಈಗ ಖಿಲ್ಜಿಯಂತೆಯೇ ಇದೆಯಂತೆ. ಇದರಿಂದ ರಣವೀರ್ ಸ್ನೇಹಿತರು ಮನೋವೈದ್ಯರನ್ನು ಸಂಪರ್ಕಿಸು ಎಂದು ಸಲಹೆ ನೀಡಿದ್ದಾರಂತೆ.

ಇನ್ನು ಪದ್ಮಾವತಿಯಾಗಿದ್ದ ದೀಪಿಕಾ ಸಹ ಅದೇ ಮೂಡ್ ನಲ್ಲಿದ್ದಾರಂತೆ. ಚಿತ್ರದ ಕೊನೆಯ ದೃಶ್ಯ ದೀಪಿಕಾರನ್ನು ಅಷ್ಟರ ಮಟ್ಟಿಎ ಡಿಸ್ಟರ್ಬ್ ಮಾಡಿದೆಯಂತೆ. ಇದರಿಂದ ರಣವೀರ್ ಹಾಗೂ ದೀಪಿಕಾ ಇಬ್ಬರು ಮನೋವೈದ್ಯರನ್ನು ಸಂಪರ್ಕಿಸಿದ್ದಾರಂತೆ. ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಪದ್ಮಾವತಿ ಚಿತ್ರ ಡಿಸೆಂಬರ್ 1ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದೆ. (ವರದಿ-ಎಂ.ಎನ್)

 

 

 

Leave a Reply

comments

Related Articles

error: