ಕರ್ನಾಟಕಮೈಸೂರು

ಎಟಿಎಂ ನಂಬರ್ ನೀಡಿ 68 ಸಾವಿರ ರೂ. ಕಳೆದುಕೊಂಡ ಪಿರಿಯಾಪಟ್ಟಣ ಶಿಕ್ಷಕಿ

ಪಿರಿಯಾಪಟ್ಟಣ (ಅ.12): ಬ್ಯಾಂಕ್‍ನಿಂದ ಕರೆ ಮಾಡುತ್ತಿರುವುದಾಗಿ ಹೇಳಿದ ವ್ಯಕ್ತಿಗೆ ಅಂಗನವಾಡಿ ಶಿಕ್ಷಕಿಯೊಬ್ಬರು ತಮ್ಮ ಎಟಿಎಂ ನಂಬರ್ ನೀಡಿ 68 ಸಾವಿರ ರೂ. ಕಳೆದುಕೊಂಡಿದ್ದಾರೆ.

ಎಸ್ ಬಿಐ ಪಿರಿಯಾಪಟ್ಟಣದ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿರುವ ತಾಲೂಕಿನ ಹುಣಸೇಕುಪ್ಪೆ ಗ್ರಾಮದ ಸುನಂದಾ ಎಂಬುವರು ವಂಚನೆಗೊಳಗಾದ ಶಿಕ್ಷಕಿ. ಸುನಂದಾ ಅವರಿಗೆ ನಿನ್ನೆ ಕರೆಮಾಡಿದ್ದ ವ್ಯಕ್ತಿ ನಿಮ್ಮ ಎಟಿಎಂ ಬ್ಲಾಕ್ ಆಗಿದೆ. ಮತ್ತೆ ನವೀಕರಣ ಮಾಡಬೇಕು ಎಂದು ಹೇಳಿ ಎಟಿಎಂ ಕಾರ್ಡ್ ನಂಬರ್, ಪಾಸ್‍ವರ್ಡ್ ಪಡೆದುಕೊಂಡಿದ್ದಾನೆ. ಇದಲ್ಲದೆ ಮೊಬೈಸ್‍ಗೆ ಎಸ್‌ಎಂಎಸ್ ಬಂದ ಒಟಿಪಿ ನಂಬರ್ ಅನ್ನೂ ಕೂಡ ವ್ಯಕ್ತಿ ಪಡೆದುಕೊಂಡಿದ್ದಾರೆ.

ಸ್ವಲ್ಪ ಹೊತ್ತಿನ ನಂತರ ಶಿಕ್ಷಕಿಯ ಮೊಬೈಲ್‍ಗೆ 68 ಸಾವಿರ ರೂ. ಹಣ ಡ್ರಾ ಮಾಡಿಕೊಂಡ ಮೆಸೇಜ್ ಬಂದಿದೆ. ವಂಚನೆ ಅರಿವಾದ ನಂತರ ಶಿಕ್ಷಕಿ ಸುನಂದಾ ಅವರು ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಮತ್ತು ಎಸ್‍ಬಿಐ ಬ್ಯಾಂಕ್‍ಗೆ ದೂರು ನೀಡಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: