ಕರ್ನಾಟಕಮೈಸೂರು

ಅಂಚೆ ಎಟಿಎಂ ಸೇವೆಗೆ ಚಾಲನೆ : ಉಳಿತಾಯ ಖಾತೆಯಲ್ಲಿ ಕೇವಲ 50 ರೂ. ಬಾಕಿಯಿದ್ದರೂ ಸೌಲಭ್ಯ

ಮೈಸೂರು (ಅ.11): ಭಾರತೀಯ ಅಂಚೆ ಇಲಾಖೆಯು ದೇಶದಾದ್ಯಂತ ಅಂಚೆ ಸಪ್ತಾಹವನ್ನು ಆಚರಿಸುತ್ತಿದ್ದು, ಅ.10ರಂದು ಉಳಿತಾಯ ಖಾತೆಯ ದಿನದ ಅಂಗವಾಗಿ, ಚಾಮುಂಡಿ ಬೆಟ್ಟದ ವ್ಯಾಪಾರಸ್ತರಿಗೆ ಅಂಚೆ ಕಛೇರಿಯ ಎಟಿಎಂ ಅನ್ನು ವಿತರಿಸಲಾಯಿತು. ಈ ಸೇವೆಯ ಅಡಿಯಲ್ಲಿ ಕೇವಲ 50 ರೂ.ಗಳ ಕನಿಷ್ಠ ಮೊತ್ತಕ್ಕೆ ಉಳಿತಾಯ ಖಾತೆ ತೆರೆದು ಎಟಿಎಂ ಅನ್ನು ಪಡೆಯಬಹುದು. ಚಿತ್ರದಲ್ಲಿ ಎನ್. ಪ್ರಕಾಶ್ – ಮೈಸೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು, ರಾಜು.ಕೆ – ಸಹಾಯಕ ಅಂಚೆ ಅಧೀಕ್ಷಕರು, ಸುರೇಶ್‍ಕುಮಾರ್‍ – ಇಟ್ಟಿಗೆಗೂಡು ಅಂಚೆ ಪಾಲಕರು, ವಸಂತಕುಮಾರ್ – ಅಂಚೆ ಮೇಲ್ವಿಚಾರಕರು ಹಾಗೂ ಇತರರನ್ನು ಕಾಣಬಹುದು.

(ಎನ್‍ಬಿಎನ್‍)

Leave a Reply

comments

Related Articles

error: