ಪ್ರಮುಖ ಸುದ್ದಿಮೈಸೂರು

ಗೃಹಸಚಿವ ರಾಮಲಿಂಗಾರೆಡ್ಡಿ ಮೈಸೂರಿಗೆ ಭೇಟಿ : ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ; ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಖಡಕ್ ಸೂಚನೆ

ಮೈಸೂರು,ಅ.12:- ಗೃಹಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಸಚಿವ ರಾಮಲಿಂಗಾರೆಡ್ಡಿ ಮೈಸೂರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಗೃಹಸಚಿವರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ  ಆಗಮಿಸಿದ  ರಾಮಲಿಂಗಾರೆಡ್ಡಿ ಅವರನ್ನು ಐಜಿ ಕಚೇರಿ ಬಳಿ ಎಡಿಜಿಪಿ ಅಲೋಕ್ ಮೋಹನ್ ಹಸ್ತಲಾಘವ ದೊಂದಿಗೆ ಹೂಗುಚ್ಛ ನೀಡುವ ಮೂಲಕ  ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ದಕ್ಷಿಣ ವಲಯ ಪೊಲೀಸ್ ಅಧಿಕಾರಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸಚಿವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸರಿಯಾದ ರೀತಿಯಲ್ಲಿ ಪಾಲನೆಯಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಇದೇ ವೇಳೆ ಮಡಿಕೇರಿ, ಚಾಮರಾಜನಗರ, ಹಾಸನ, ಮಂಡ್ಯ, ಮೈಸೂರು ನಗರ ಮತ್ತು ಗ್ರಾಮಾಂತರಕ್ಕೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.  ಎಸಿಪಿ, ಡಿವೈಎಸ್ಪಿ, ಇನ್ಸಪೆಕ್ಟರ್ ಗಳು, ಎಸ್ಪಿಗಳ ಜೊತೆ ಅಪರಾಧ ಪ್ರಕರಣಗಳನ್ನು ಯಾವರೀತಿ ನಿಭಾಯಿಸುತ್ತಿದ್ದೀರಿ, ರೌಡಿಶೀಟರ್ ಗಳ ಸಂಖ್ಯೆ ಎಷ್ಟಿದೆ ಎಂಬ ಮಾಹಿತಿಗಳನ್ನು ಪಡೆದರಲ್ಲದೇ ಯಾವುದೇ ಜಿಲ್ಲೆಯಲ್ಲಿಯೂ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಿ ಎಂದು ಖಡಕ್  ಸೂಚನೆ ನೀಡಿದರು.

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ..ಸುಬ್ರಹ್ಮಣ್ಯೇಶ್ವರರಾವ್, ಎಡಿಜಿಪಿ ಅಲೋಕ್ ಮೋಹನ್, ಐಜಿ ವಿಫುಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: