ಕರ್ನಾಟಕಪ್ರಮುಖ ಸುದ್ದಿಮೈಸೂರು

ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅಭಿಮಾನಿ ಬಳಗ, ಬೆಂಬಲಿಗರ ಸಮಾವೇಶ ನ.8ರಂದು

ಮಾಜಿ ಸಚಿವ, ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದು ರಾಜೀನಾಮೆ ನೀಡಿ ಇದೇ ಪ್ರಪ್ರಥಮ ಭಾರಿಗೆ ತಮ್ಮ ಬೆಂಬಲಿಗರ ಮತ್ತು ಅಭಿಮಾನಿ ಬಳಗದ ಬಲಾಬಲವನ್ನು ಪ್ರದರ್ಶಿಸಲು ವೇದಿಕೆಯು ಸಿದ್ದವಾಗಿದ್ದು ನ.8ರಂದು ನಂಜನಗೂಡಿನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮುಡಾ ಆದ್ಯಕ್ಷ ಕೆ.ಆರ್.ಮೋಹನ್ ಕುಮಾರ್ ತಿಳಿಸಿದರು.

ಅವರು, ಭಾನುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ನಾಲ್ಕು ದಶಕಗಳಿಂದಲೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಿದ್ಧಾಂತದ ಬುನಾದಿಯ ಮೇಲೆಯೇ ರಾಜಕಾರಣ ನಡೆಸಿದ ಗೌರವಯುತ ರಾಜಕಾರಣಿಯನ್ನು ಕಾಂಗ್ರೆಸ್ ಮುಖಂಡರು ಹೀನಾಯವಾಗಿ ನಡೆಸಿದ್ದಾರೆ.  ಚುನಾವಣಾ ರಾಜಕೀಯದಿಂದಲೇ ನಿವೃತ್ತಿಯಾಗುವೆ ಎಂದು ಘೋಷಿಸಿದ್ದರೂ ಏಕಾಏಕಿ ಅವರನ್ನು ಸಂಪುಟದಿಂದ ಕೈಬಿಟ್ಟು ಕಾಂಗ್ರೆಸ್ ತಾತ್ಸಾರ ಮನೋಭಾವವನ್ನು ಪ್ರದರ್ಶಿಸಿದ್ದು ಇದರಿಂದ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಪ್ರಭಾವಿ ನಾಯಕರಾಗಿದ್ದು ದಲಿತ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಯಿರುವ ಮುಖಂಡರಾದ ಶ್ರೀನಿವಾಸ ಪ್ರಸಾದ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ವ್ಯವಸ್ಥಿತವಾಗಿ ಪಿತೂರಿ ನಡೆಸಿ ದಮನಿಸಿದ್ದಾರೆ.  ಚುನಾವಣಾ ನಿವೃತ್ತಿ ಮನೋಭಾವದ ಮುಖಂಡನ್ನು ಗೌರವಯುತವಾಗಿ ಬೀಳ್ಕೊಡುವ ಬದಲು ದುರಾಡಳಿತ ರಾಜಕೀಯ ಬೆಳವಣಿಗೆಯಿಂದ ಉಪ ಚುನಾವಣೆಗೆ ವೇದಿಕೆ ಸಿದ್ಧವಾಗಿದ್ದು ಬೇಸರದ ಸಂಗತಿ. ಉಪ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳೇ ಇಲ್ಲವೆಂದು ವ್ಯಂಗ್ಯವಾಡಿದರು.

ಬಲ ಪ್ರದರ್ಶನಕ್ಕೆ ಸಿದ್ಧವಾಯಿತು ವೇದಿಕೆ : ಈ ಭಾಗದ ದಲಿತ ಮುಖಂಡ ಸಹೃದಯಿ ಹಾಗೂ ಸಚ್ಚಾರಿತ್ರವಂತ ರಾಜಕಾರಣಿ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರನ್ನು ಎಲ್ಲಾ ದಲಿತ ವರ್ಗವೂ ಬೆಂಬಲಿಸಿದ್ದು ಅವರ ಅಭಿಮಾನಿಗಳು ನ.19ರಂದು ಚಾಮರಾಜನಗರ ಜಿಲ್ಲೆಯಲ್ಲಿ ಹಾಗೂ ಮುಂಬರುವ ದಿನಗಳಲ್ಲಿ ಮೈಸೂರು ಹಾಗೂ ಹುಣಸೂರಿನಲ್ಲಿ ಸಮಾವೇಶ ನಡೆಸಿ ಅಭಿಮಾನಿಗಳ, ಬೆಂಬಲಿಗ ಕಾರ್ಯಕರ್ತರ ಆಭಿಪ್ರಾಯ ಕ್ರೂಢೀಕರಿಸಿ ನಂತರ ಮುಂದಿನ ನಡೆಯನ್ನು ನಿರ್ಧರಿಸಲಾಗುವುದು. ನಂಜನಗೂಡಿನಲ್ಲಿ ನಡೆಯುವ ಸಮಾವೇಶಕ್ಕೆ ಕನಿಷ್ಠ ಐದು ಸಾವಿರ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.  ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈಗಾಗಲೇ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್‍ ನ  ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ರಾಷ್ಟ್ರೀಯ ಪಕ್ಷಗಳಾದ ಸಮಾಜವಾದಿ, ಆಮ್ ಆದ್ಮಿ ಪಕ್ಷಗಳು ಅವರಿಗೆ ವಿಶೇಷ ಆಹ್ವಾನ ನೀಡಿವೆ. ಯಾರಿಗಿಲ್ಲ ಹೇಳಿ ಆರೋಗ್ಯದ ಸಮಸ್ಯೆ, ಕೇವಲ 68 ವರ್ಷಕ್ಕೆ ವಯಸ್ಸಾಗಿದೆ ಎಂದ್ರೇ ಬಹಳಷ್ಟು ಮಂದಿ ರಾಜಕೀಯ ನಿವೃತ್ತರಾಗಬೇಕಾಗುವುದು ಎಂದು ಮಾರ್ಮಿಕವಾಗಿ ನುಡಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ಪ್ರಸಾದ್ ಅಭಿಮಾನಿ ಬಳಗದ ಶೈಲಜ ಬಾಲರಾಜ್, ವೆಂಕಟೇಶ್, ನಂದಕುಮಾರ್ ಹಾಗೂ ಚಂದ್ರು ಉಪಸ್ಥಿತರಿದ್ದರು.

Leave a Reply

comments

Related Articles

error: