ಮೈಸೂರು

ಮಕ್ಕಳ ಮಾರಾಟ ಜಾಲ : ಪ್ರಮುಖ ಆರೋಪಿ ಬಂಧನ

ಮೈಸೂರಿನಲ್ಲಿ ಮಕ್ಕಳ ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದ ರೂವಾರಿ, ಮುಖ್ಯ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಮಂಡಿಮೊಹಲ್ಲಾ ಖಾಸಗಿ ನರ್ಸಿಂಗ್ ಹೋಂನಲ್ಲಿ ಅರೆಕಾಲಿಕ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಉಷಾ ಪತಿ ಫ್ರಾನ್ಸಿಸ್  ಎಂದು ಹೇಳಲಾಗಿದೆ. ಆತ ರಟ್ಟಿನ ಪೆಟ್ಟಿಗೆಯೊಂದರಲ್ಲಿ 15 ದಿನಗಳ ಹೆಣ್ಣು ಶಿಶುವೊಂದನ್ನು ತುಂಬಿಸಿಕೊಂಡು ಕೇರಳಕ್ಕೆ ಸಾಗಿಸುತ್ತಿದ್ದ ವೇಳೆ ಗುಂಡ್ಲುಪೇಟೆಯ ಬಳಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಗುಂಡ್ಲುಪೇಟೆಯ ಬಳಿ ವಾಹನ ಬದಲಾಯಿಸುವ ವೇಳೆ ಫ್ರಾನ್ಸಿಸ್  ವರ್ತನೆ  ಪೊಲೀಸರಲ್ಲಿ ಅನುಮಾನ ಹುಟ್ಟಿಸಿದ್ದು ಸ್ಥಳಕ್ಕೆ ತೆರಳಿ ರಟ್ಟಿನ ಪೆಟ್ಟಿಗೆಯ ಕುರಿತು ವಿಚಾರಿಸಿದ್ದಾರೆ. ಇದರಿಂದ ಕಂಗಾಲಾದ ಫ್ರಾನ್ಸಿಸ್ ಪೆಟ್ಟಿಗೆಯನ್ನು ಅಲ್ಲಿಯೇ ಬಿಟ್ಟು ಅಲ್ಲಿಂದ ಕಾಲ್ಕಿಳಲು ಯತ್ನಿಸಿದಾಗ ಗುಂಟ್ಲುಪೇಟೆಯ ಸರ್ಕಲ್ ಇನ್ಸಪೆಕ್ಟರ್ ಕೃಷ್ಣಪ್ಪ ಅವರ ಕೈಗೆ  ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.

ಮಗುವನ್ನು ಮೈಸೂರಿನ ಬಾಪೂಜಿ ಬಾಲಮಂದಿರಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

comments

Related Articles

error: