ಪ್ರಮುಖ ಸುದ್ದಿಮೈಸೂರು

“ಸ್ವರಾಜ್ಯದಾಟ” ನಾಟಕ ಪ್ರದರ್ಶನ ನ.10 ರಿಂದ 14ರವರೆಗೆ

ಮೈಸೂರಿನ ರಂಗವಲ್ಲಿಯಿಂದ ಗಾಂಧೀಜಿಯವರ ಹಿಂದ್ ಸ್ವರಾಜ್  ಕೃತಿ ಆಧಾರಿತ ಹಿರಿಯ ರಂಗ ನಿರ್ದೇಶಕ ಪ್ರಸನ್ನ ನಿರ್ದೇಶನದ  “ಸ್ವರಾಜ್ಯದಾಟ” ನಾಟಕವನ್ನು ನ.10ರಿಂದ ನ.14ರವರೆಗೆ ಪ್ರದರ್ಶನ ನಡೆಸಲಿದೆ ಎಂದು ರಂಗ ನಿರ್ದೇಶಕ ಪ್ರಸನ್ನ ತಿಳಿಸಿದರು.

ಅವರು, ಭಾನುವಾರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾಟಕವನ್ನು ಬೋಗಾದಿ ರಸ್ತೆಯಲ್ಲಿರುವ ಧ್ವನ್ಯಾಲೋಕದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಬೆಂಗಳೂರಿನ ಗ್ರಾಮಸೇವಾ ಸಂಘ ಹಾಗೂ ದೆಹಲಿಯ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸಹಯೋಗದಲ್ಲಿ ರಾಜ್ಯದ ಮೈಸೂರು ಸೇರಿದಂತೆ ನಂಜನಗೂಡು ರಾಯಚೂರು ಹಾಗೂ ಇತರ ನಗರ ಗ್ರಾಮಗಳಲ್ಲಿ ಪ್ರದರ್ಶಿಸಿ ಈ ನಾಟಕದಿಂದ ಕರ್ನಾಟಕದಾದ್ಯಂತ ಸಾಂಸ್ಕೃತಿಕ ಚಳುವಳಿಗೆ ನಾಂದಿ ಹಾಡಲಿದ್ದೇವೆ. ಸಮಾಜವನ್ನು ಕೇವಲ ನರೇಂದ್ರಮೋದಿ ಹಾಗೂ ರಾಹುಲ್ ಗಾಂಧಿಯವರಿಂದ ಮಾತ್ರ ಬದಲಿಸಲು ಸಾಧ್ಯವಿಲ್ಲ ಪ್ರತಿಯೊಬ್ಬ ಯುವಕರು ಸಮಾಜ ಬದಲಾವಣೆಗೆ ಕಂಕಣಬದ್ಧರಾಗಬೇಕು. ಹಕ್ಕು ಹಂಚುವುದರಿಂದ ಪ್ರಜಾಪ್ರಭುತ್ವ ಬರುವುದಿಲ್ಲ, ನಾಟಕವನ್ನು ವರ್ಷ ಪೂರ್ತಿ ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರದರ್ಶಿಸುವ ಮೂಲಕ ಸಾಂಸ್ಕೃತಿಕ ಚಳುವಳಿಯನ್ನು ಹಮ್ಮಿಕೊಂಡು ಗ್ರಾಮಗಳು ಸೇರಿದಂತೆ ನಗರ ಪ್ರದೇಶದ ಜನರನ್ನು ಜಾಗೃತಗೊಳಿಸುವ ಪ್ರಯತ್ನವಾಗಿದೆ ಎಂದರು.

ಕ್ರಾಂತಿ ಗೀತೆಗಳು : ಮಹಾತ್ಮಗಾಂಧಿ, ಬುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ವಿವೇಕಾನಂದರ ತತ್ವ ಸಂದೇಶಗಳನ್ನು ಹಳ್ಳಿ ಹಳ್ಳಿಗಳಿಗೂ ತಲುಪಿಸಿ ಜನಜಾಗೃತಿ ಮೂಡಿಸಲು ಯುವಕರೇ ಬನ್ನಿ..ಹೊರಡಿ..ಹೊರಡಿ ಹಳ್ಳಿಯ ಕಡೆಗೆ..ಸ್ಮಾರ್ಟ್ ಜನರೇ.,  ಏ..ಜೀವ.. ನಗರದ ಬದುಕು ಸಾವೇ ಕಣೋ.. ಎನ್ನುವ ನಾಟಕದಲ್ಲಿರು ಕ್ರಾಂತಿಗೀತೆಗಳನ್ನು ಕಿಶೋರ್, ಸಿರಿಸಿಂಚನ, ಪ್ರದೀಪ್, ಶ್ವೇತಾ ಹಾಗೂ ಮಹೇಶ್ ಅವರ ತಂಡ ಹಾಡಿನ ಮೂಲಕ ನಾಟಕದ ಮೂಲೋದ್ದೇಶವನ್ನು ಸಾದರಪಡಿಸಿದರು.

ಸುದ್ಧಿಗೋಷ್ಠಿಯಲ್ಲಿ ಗ್ರಾಮಸೇವಾ ಸಂಘದ ಅಖಿಲೇಶ್, ಪರ್ಯಾಯ ಸಾಮಾಜಿಕ ಸಾಂಸ್ಕೃತಿಯ ಪರವಾಗಿ ಬದ್ನಾಳು ಸತ್ಯಾಗ್ರಹ ಸದಸ್ಯ ಶಿವಸ್ವಾಮಿ  ಹಾಗೂ ರಂಗವಲ್ಲಿಯ ಮಹೇಶ್ ಉಪಸ್ಥಿತರಿದ್ದರು.

press-meet-2

 

Leave a Reply

comments

Related Articles

error: