ಮೈಸೂರು

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ನೆಲಕಚ್ಚಲಿದೆ: ಎಸ್.ಸಿ ಅಶೋಕ್

ಮೈಸೂರು,ಅ.12:- ನಮ್ಮ ಭಾರತೀಯ ಜನತಾ ಪಾರ್ಟಿಯ ವತಿಯಿಂದ ರೈತರ ಏಳಿಗೆ ಹಾಗೂ ಅವರ ಯಶಸ್ಸಿಗಾಗಿ ಹಮ್ಮಿಕೊಂಡಿರುವ ರೈತಯಾತ್ರಾ ಜಾಥವು ಐದನೇ ದಿನ ಪೂರೈಸಿದೆ.

ನಿನ್ನೆ ವಾಸ್ತವ ಹೂಡಿದ್ದ ನಗರ್ಲೆ ಗ್ರಾಮದಿಂದ ಸಜ್ಜಾಗಿ ಗುರುವಾರ ಬೆಳಿಗ್ಗೆ ನಗರ್ಲೆ ಗ್ರಾಮದ ಹತ್ತಿರವಿರುವ ಮಾಗಳಮ್ಮ ತಾಯಿ ದೇವಾಲಯಕ್ಕೆ ತೆರಳಿ ರೈತರಿಗೆ ಯಶಸ್ಸು,ಕೀರ್ತಿ ಸಿಗಲೆಂದು ಭಕ್ತಿಭಾವದೊಂದಿದೆ ಪ್ರಾರ್ಥಿಸಿ ಪೂಜೆ ಸಲ್ಲಿಸಿ ಅಲ್ಲಿಂದ ಸರಗೂರು ಆಲಂಬೂರು ,ಆಲಂಬೂರು ಮಂಡಿ,ಹೊರಳವಾಡಿ, ನಂಜನಗೂಡು ತಾಲ್ಲೂಕು,ಇಲ್ಲಿರುವ ಐತಿಹಾಸಿಕ ದೇವಸ್ಥಾನವಾದ ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪ್ರಾರ್ಥನೆ ಸಲ್ಲಿಸುವುದರ ಜೊತೆ ಪಕ್ಕದಲ್ಲಿರುವ ನೆಹರು ಸರ್ಕಲ್ ವರೆಗೆ ಕಾಲ್ನಡಿಗೆಯೊಂದಿಗೆ ಪಾದಯಾತ್ರೆ ತೆರಳಿ  ಮಲ್ಲನಮೂಲೆ ಮಠ,ಚಿಕ್ಕಯ್ಯನ ಛತ್ರ,ಬಂಚಳ್ಳಿ ಹುಂಡಿ, ತಾಂಡವಪುರ, ಕಡಕೋಳ, ಇದಾದ ಬಳಿಕ ಕಡಕೋಳ ಗ್ರಾಮದಲ್ಲಿ ವಾಸ್ತವ್ಯ ಹೂಡಿದೆ.

ಕಾಲ್ನಡಿಗೆಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿರಿಯ ಬಿ.ಜೆ.ಪಿ ನಾಯಕರು ಹಾಗೂ ಜಿಲ್ಲಾ ಬಿ.ಜೆ.ಪಿ ಉಪಾಧ್ಯಕ್ಷ ಎಸ್.ಸಿ ಅಶೋಕ್ ಮಾತನಾಡಿ ಕಳೆದ ಐದು ದಿನಗಳಿಂದ ರೈತರ ಪರ ಹೋರಾಟ ಮಾಡುತ್ತಿರುವ ಈ ಒಂದು ಕಾಲ್ನಡಿಗೆಯ ಪಾದಯಾತ್ರೆಯು ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆಯ ಗಂಟೆಯನ್ನು ನೀಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ರೈತವಿರೋಧಿ ಸರಕಾರವೆಂದೇ ಖ್ಯಾತಿಪಡೆದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ನೆಲಕಚ್ಚಲಿದೆ ಎಂದು ಕಾಂಗ್ರೆಸ್ ಸರಕಾರದ ಬಗ್ಗೆ ಹರಿಹಾಯ್ದರು.

ರೈತರು ತಾವು ಬೆಳೆಯುವ ಯಾವುದೇ ಪದಾರ್ಥಗಳಿಗೆ ಬೆಂಬಲ ನೀಡದೇ ಕಣ್ಮುಚ್ಚಿ ಕುಳಿತಿದೆ.ಈ ಸರಕಾರದ ಅವಧಿಯಲ್ಲಿ ರೈತರು ಸಾವು ನೋವನ್ನೇ ಅನುಭವಿಸಿದರೇ ಹೊರತು ಸುಗ್ಗಿಯ ಕಾಲ ಬಂದಾಗ ನಮ್ಮ ರೈತ ಸಂತಸ ಪಡಲೇ ಇಲ್ಲ ಇದೊಂದು ದುಃಖದ ಸಂಗತಿಯೇ ಬದಲಾಗಿ ಬೇರೇನಿಲ್ಲ ಎಂದು ಹೇಳಿದರು. ರೈತರ ಮೊಗದಲ್ಲಿ ನಾವು ಮಂದಹಾಸವನ್ನು ಕಾಣಬೇಕಾದರೆ ಮುಂದಿನ ದಿನಗಳಲ್ಲಿ ರೈತರ ಪರವಾದಂತಹ ಸರಕಾರ ಅಸ್ತಿತ್ವಕ್ಕೆ ಬರಬೇಕು ನಮ್ಮ ರಾಜ್ಯದ ರೈತ ನಾಯಕ ಬಿ.ಎಸ್ ಯಡಿಯೂರಪ್ಪ ನವರು ಈ ರಾಜ್ಯದ ರೈತ ಮುಖ್ಯಮಂತ್ರಿಗಳಾಗಿ ಜವಾಬ್ದಾರಿ ಸ್ವೀಕರಿಸಿದಾಗ ಮಾತ್ರ ರೈತರ ಪಾಲಿಗೆ ಸುಗ್ಗಿ ದಿನ ಬರಲು ಸಾಧ್ಯವೆಂದು  ರೈತರಿಗೆ ತಿಳಿಸಿದರು.

ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾದ ಪ್ರಸನ್ನ ಗೌಡ, ನಂಜನಗೂಡು, ಮಹದೇವಯ್ಯ,ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ,ಬಿ.ಎಂ ರಾಮು ಜಿಲ್ಲಾ  ಪ್ರಧಾನಕಾರ್ಯದರ್ಶಿ ಮಾರ್ಬಳ್ಳಿ ಮೂರ್ತಿ, ಕಾರ್ತಿಕ್ ಗೌಡ,ನಂಜನಗೂಡು ಅಧ್ಯಕ್ಷರಾದ ಕೆಂಡಗಣ್ಣಪ್ಪ,ನಂಜನಗೂಡು ನಗರ ಅಧ್ಯಕ್ಷ ವಿನಯ್,ಎಸ್.ಡಿ ಮಹೇಂದ್ರ,ಶಂಭುಪಟೇಲ್, ಮೈಸೂರು ನಗರ ಮಹಿಳಾಮೋರ್ಚಾ ಪ್ರಧಾನಕಾರ್ಯದರ್ಶಿ ಲಕ್ಷ್ಮೀದೇವಿ,ರಾಜ್ಯ ಮಹಿಳಾಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಅನಿತಾಸದಾನಂದ್,ಮಂಗಳಾಸೋಮಶೇಖರ್,ನಂಜನಗೂಡು ನಗರಸಭಾ ಉಪಾಧ್ಯಕ್ಷ ಪ್ರದೀಪ್ ,ಇವರ ಜೊತೆ ನೂರಾರು ನಂಜನಗೂಡು ಹಾಗೂ ವರುಣಾ ಕ್ಷೇತ್ರದ ರೈತರು ಕಾಲ್ನಡಿಗೆಯ ಹೋರಾಟದಲ್ಲಿ ಉಪಸ್ಥಿತರಿದ್ದರು.          (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: