ಕರ್ನಾಟಕಮೈಸೂರು

ಅಕ್ರಮ ಗಣಿಗಾರಿಕೆ : ನ.10ರವರೆಗೆ ನಿಷೇಧಾಜ್ಞೆ ಜಾರಿ ಮಾಡಿದ ಪಾಂಡವಪುರ ತಹಶೀಲ್ದಾ‍ರ್‍

ಮಂಡ್ಯ (ಅ.13): ಪಾಂಡವಪುರ ತಾಲ್ಲೂಕು, ಚಿನಕುರಳಿ ಹೋಬಳಿ, ಬೇಬಿ ಬೆಟ್ಟದ ಕಾವಲು, ಚಿನಕುರಳಿ, ಹೊನಗಾನಹಳ್ಳಿ ಹಾಗೂ ಬನ್ನಂಗಾಡಿ ಸರಹದ್ದಿನ ಬೇಬಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಧಿಕೃತ ಗಣಿಗಾರಿಕೆಗೆ ಸಂಬಂಧಿಸಿದಂತೆ ದೂರುಗಳಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳ ಸಮರ್ಪಕ ನಿರ್ವಹಣೆ ಮಾಡುವ ಸಂಬಂಧ ಯಾವುದೇ ರೀತಿಯ ಕಲ್ಲು ಗಣಿಗಾರಿಕೆಯಾಗಲಿ, ಜಲ್ಲಿ ಕ್ರಷರ್ ಘಟಕಗಳ ಚಾಲನೆಗಳನ್ನು ಹಾಗೂ ಕಲ್ಲು ಪುಡಿ, ಜಲ್ಲಿ ಸೈಜ್‍ಗಲ್ಲು, ಬೋರ್ಡಸ್, ದಿಂಡಿಕಲ್ಲು, ಇವುಗಳ ಸಾಗಾಣಿಕೆಗಳನ್ನು ನಿರ್ಬಂಧಿಸಿ ಪಾಂಡವಪುರ ತಹಶೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ಡಿ.ಹನುಮಂತರಾಯಪ್ಪ ಅವರು ಆದೇಶ ಹೊರಡಿಸಿದ್ದಾರೆ.

ಪಾಂಡವಪುರ ತಾಲ್ಲೂಕು, ಚಿನಕುರಳಿ ಹೋಬಳಿ, ಬೇಬಿ ಬೆಟ್ಟದ ಕಾವಲು, ಚಿನಕುರಳಿ, ಹೊನಗಾನಹಳ್ಳಿ ಹಾಗೂ ಬನ್ನಂಗಾಡಿ ಸರಹದ್ದಿನ ಬೇಬಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ಟೋಬರ್ 10 ರಿಂದ ನವೆಂಬರ್ 10 ರ ಬೆಳಿಗ್ಗೆ 6 ಗಂಟೆಯವರೆಗೆ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ಸಿ.ಆರ್.ಪಿ.ಸಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: