ಕ್ರೀಡೆಪ್ರಮುಖ ಸುದ್ದಿ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಆಶೀಶ್ ವಿದಾಯ

ನವದೆಹಲಿ,ಅ.13-ಕ್ರಿಕೆಟಿಗ ಅಶೀಶ್ ನೆಗ್ರಾ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲು ಮುಂದಾಗಿದ್ದು, ತವರಿನಲ್ಲೇ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸುವುದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ ಎಂದು ಭಾರತ ತಂಡದ ಹಿರಿಯ ವೇಗಿ ಆಶೀಶ್ ನೆಹ್ರಾ ಹೇಳಿದ್ದಾರೆ.

ನಿವೃತ್ತಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕ್ರಿಕೆಟ್ ಕಲಿತ ಮತ್ತು ನನ್ನನ್ನು ಬೆಳೆಸಿದ ತವರಿನ ಅಭಿಮಾನಿಗಳ ಮುಂದೆ ನಿವೃತ್ತಿ ಘೋಷಣೆ ಮಾಡುವುದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ನನ್ನ 18 ವರ್ಷಗಳ ಸುಧೀರ್ಘ ಕ್ರಿಕೆಟ್ ಬದುಕಿನ ಕುರಿತಂತೆ ನನ್ನಲ್ಲಿ ಸಾರ್ಥಕ ಭಾವವಿದೆ. ನನ್ನ ನಿರ್ಧಾರದಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ. ನವೆಂಬರ್ 1ರಂದು ದೆಹಲಿಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯವೇ ನನ್ನ ವೃತ್ತಿ ಬದುಕಿನ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎಂದು ಹೇಳಿದ್ದಾರೆ.

ಆಶಿಶ್ ನೆಹ್ರಾ ತಂಡದಲ್ಲಿ ಯಾಕೆ ಇರಬಾರದು ಎನ್ನುವ ಬದಲು ಯಾಕೆ ಇದ್ದಾರೆ ಎಂದು ಜನ ಪ್ರಶ್ನಿಸುವ ಮುನ್ನ ನಿವೃತ್ತಿ ಆದರೆ ಒಳ್ಳೆಯದು. ನಿವೃತ್ತಿ ಕುರಿತು ಟೀಮ್ ಮ್ಯಾನೇಜ್​ವೆುಂಟ್ ಹಾಗೂ ಆಯ್ಕೆ ಸಮಿತಿ ಸದಸ್ಯರೊಂದಿಗೂ ಮಾತನಾಡಿದ್ದೇನೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯ ಎಲ್ಲ ಪಂದ್ಯಗಳನ್ನು ಆಡಬೇಕು ಎನ್ನುವ ಮನಸ್ಥಿತಿಯಲ್ಲಿ ನಾನು ಬಂದಿದ್ದೆ. ಆದರೆ, ಯುವ ತಂಡ ಜವಾಬ್ದಾರಿ ಹೊರಲು ಸಿದ್ಧವಾಗಿರುವಂತೆ ಕಂಡಿದ್ದು, ನನ್ನ ನಿವೃತ್ತಿಗೆ ಇದೇ ಸಕಾಲ ಎಂದೆನಿಸತ್ತಿದೆ ಎಂದಿದ್ದಾರೆ. (ವರದಿ-ಎಂ.ಎನ್)

 

Leave a Reply

comments

Related Articles

error: