ಮೈಸೂರು

ಕಾರಿನಿಂದ ಹಣ ಕಳವು ಪ್ರಕರಣ: ಅಂತಾರಾಜ್ಯ ಕಳ್ಳರ ಬಂಧನ

ನಗರದಲ್ಲಿ ಕಾರಿನಲ್ಲಿ ನಗದು ಕಳ್ಳತನ ಮಾಡಿದ್ದ ಅಂತಾರಾಜ್ಯ ಕಳ್ಳರನ್ನು ಮೈಸೂರು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 2 ರಂದು ರಮಾವಿಲಾಸ ರಸ್ತೆಯಲ್ಲಿ ಅಬ್ದುಲ್ ನಾಸಿರ್ ಎಂಬುವರು ಕಾರು ನಿಲ್ಲಿಸಿ ತೆರಳಿದ್ದ ಸಂದರ್ಭ ಕಳ್ಳರು ಕಾರಿನಲ್ಲಿದ್ದ 4 ಲಕ್ಷದ 40 ಸಾವಿರ ಹಣವನ್ನು ಕದ್ದು ಪರಾರಿಯಾಗಿದ್ದರು. ನೌಫಲ್ (29) ಲಾರೇನ್ಸ್ (22) ಬಂಧಿತ ಆರೋಪಿಗಳು. ಬಂಧಿತರಿಂದ 4,43,000 ನಗದು ವಶ ಪಡಿಸಿಕೊಳ್ಳಲಾಗಿದೆ.

ಹಣ ಕಳವು ನಡೆದ ನಾಲ್ಕು ದಿನಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Leave a Reply

comments

Related Articles

error: