ಕರ್ನಾಟಕ

ವಿಷನ್ 2025: ಮಂಡ್ಯದಲ್ಲಿ ಸಲಹೆ ಹಾಗೂ ಅಭಿಪ್ರಾಯ ಸಂಗ್ರಹ

ಮಂಡ್ಯ (ಅ.13) : ವಿಷನ್ 2025 ಡಾಕ್ಯುಮೆಂಟ್ ಸಿದ್ಧತೆ ಸಂಬಂಧ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಅಧಿಕಾರೇತರ ಸದಸ್ಯರ ಸಭೆಯಲ್ಲಿ ಮುಂದಿನ ಏಳು ವರ್ಷದಲ್ಲಿ ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕುರಿತು ಹಲವು ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಗುರುವಾರ ಸಂಗ್ರಹಿಸಲಾಯಿತು.

ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ಧಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ವಿಷನ್ 2025 ಡಾಕ್ಯುಮೆಂಟ್ ಸಂಗ್ರಹಿಸಲು ನಿರ್ಧರಿಸಿದ್ದು, ಈ ಸಂಬಂಧ ಅಧಿಕಾರಿಗಳು, ಅಧಿಕಾರೇತರ ತಜ್ಞರು ಹಾಗೂ ಸಮಾಜ ಎಲ್ಲಾ ಕ್ಷೇತ್ರದ ಜನರು ಒಳಗೊಂಡ ಜಿಲ್ಲಾಮಟ್ಟದ ಕಾರ್ಯಾಗಾರ ನಡೆಸಲಾಗುತ್ತಿದೆ. ಪ್ರಾಥಮಿವಾಗಿ ನಿಮ್ಮೆಲ್ಲರಿಂದ ಸಲಹೆ ಮತ್ತು ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ನಂತರ ಅಕ್ಟೋÀಬರ್ 27 ರಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು, ಅಧಿಕಾರೇತರ ತಜ್ಞರು ಸಮ್ಮುಖದಲ್ಲಿ ಕಾರ್ಯಾಗಾರ ನಡೆಸಲಾಗುವುದು ಎಂದರು.

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷರಾದ ಪಿ.ಎಂ. ಸೋಮಶೇಖರ್ ಅವರು ಮಾತನಾಡಿ ಮಂಡ್ಯ ಜಿಲ್ಲೆಯಲ್ಲಿ ಯುವ ಜನರು, ಕ್ರೀಡಾಸಕ್ತರಿಗೆ ಸುಸಜ್ಜಿತ ಮೂಲಸೌಕರ್ಯಗಳಿಲ್ಲದ ಕ್ರೀಡಾಂಗಣವಿದೆ. ಹಿರಿಯ ನಾಗರೀಕರಿಗೆ ಅನುಕೂಲವಾಗುವಂತೆ ಕ್ರೀಡಾಂಗಣದಲ್ಲಿ ವಾಕಿಂಗ್ ಪಾತ್ ನಿರ್ಮಾಣವಾಗಬೇಕು. ಜಿಲ್ಲೆಯ ಬಹಳಷ್ಟು ಯುವಕರು ಹೊರ ಜಿಲ್ಲೆಗಳಿಗೆ ಹೋಗಿ ಕ್ರೀಡಾಭ್ಯಾಸ ಮಾಡುವಂತಹ ಪರಿಸ್ಥಿತಿ ಜಿಲ್ಲೆಯಲ್ಲಿದೆ ಎಂದು ಸಲಹೆ ನೀಡಿದರು.

ಪರಿಸರ ತಜ್ಞರಾದ ಡಾ. ರಾಮಲಿಂಗಯ್ಯ ಅವರು ಮಾತನಾಡಿ ಮಂಡ್ಯ ನಗರದಲ್ಲಿ ಕಸ ವಿಲೇವಾರಿ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಅದಕ್ಕಾಗಿ ಕಸ ವಿಲೇವಾರಿ ನಿರ್ಮಾಣ ಘಟಕದ ಅಗತ್ಯತೆ ಇದೆ. ಮಳೆ ನೀರು ಕೊಯಿಲಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಉದ್ಯೋಗ ಮತ್ತು ವಿನಿಮಯ ಇಲಾಖೆಯನ್ನು ಉನ್ನತ್ತಿಕರಿಸುವ ಮೂಲಕ ಸ್ಪರ್ಧಾತ್ಮಕ ಕೇಂದ್ರಗಳನ್ನಾಗಿ ಮಾಡುವ ಜೊತೆಯಲ್ಲಿ ಮಕ್ಕಳ ಅಭಿವೃದ್ಧಿ ಪಡಿಸಲು ಕ್ರಮವಹಿಸಬೇಕು ಎಂದು ಹೇಳಿದರು.

ಇತಿಹಾಸಕಾರರಾದ ಪ್ರೊ.ಕರಿಮುದ್ದಿನ್ ಅವರು ಮಾತನಾಡಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಜ್ಞಾನವೆಂಬುವುದು ದೊಡ್ಡ ಶಕ್ತಿವಿದ್ದಂತೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಶಿಕ್ಷಣದ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಆದರಿಂದ ಸರ್ಕಾರ ಮತ್ತು ಜಿಲ್ಲಾಡಳಿತ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಯುವ ಜನರ ಉಜ್ವಲ ಭವಿಷ್ಯಕ್ಕೆ ದಾರಿಯಾಗಬೇಕು ಎಂದರು.

ನಗರದ ಅಭಿವೃದ್ಧಗೆ ಆದ್ಯತೆ ನೀಡುವ ಜೊತೆಯಲ್ಲಿ ಗ್ರಾಮಗಳ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು. ಗ್ರಾಮಗಳಿಗೆ ನಗರದೊಂದಿಗೆ ಸಂಪರ್ಕ ಸಾಧಿಸಲು ಗುಣಮಟ್ಟದ ರಸ್ತೆ ನಿರ್ಮಾಣವಾಗಬೇಕು. ಸ್ಮಾರ್ಟ್ ಸಿಟಿ ರೀತಿಯಲ್ಲಿ ಸ್ಮಾರ್ಟ್ ಗ್ರಾಮಗಳು ನಿರ್ಮಾಣವಾದರೆ ಜಿಲ್ಲೆಯ ಜೊತೆಯಲ್ಲಿ ರಾಷ್ಟ್ರ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಅಕ್ಟೋಬರ್ 27 ರಂದು ನಡೆಯುವ ಕಾರ್ಯಾಗಾರದಲ್ಲಿ ಸಂಪೂರ್ಣ ವಿವಿರಗಳೊಂದಿಗೆ ಮಾಹಿತಿಯನ್ನು ನೀಡಲಾಗುವುದು ಎಂದು ನಗರ ಸಾರಿಗೆ ತಜ್ಞರಾದ ಎಸ್.ಪಿ.ಮಹೇಂದ್ರ ತಿಳಿಸಿದರು.

ಡಾ.ಶಂಕರೇಗೌಡ ಅವರು ಮಾತನಾಡಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಬೇಕಾಗಿದೆ. ಆರೋಗ್ಯಕರ ಸಮಾಜದಿಂದ ದೇಶದ ಅಭಿವೃದ್ಧಿ ಸಾಧ್ಯ. ಕಡಿಮೆ ಬೆಲೆಯಲ್ಲಿ ಔಷಧಿಗಳು ಸಾರ್ವಜನಿಕರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧೀಕಾರಿಗಳು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ದಿನದ 24 ಗಂಟೆಗಳ ಕಾಲ ಸೇವೆಗೆ ಲಭ್ಯವಿರುವಂತೆ ಕ್ರಮವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಪರಿಸರ ತಜ್ಞರಾದ ಶಿವಶಂಕರ್ ಅವರು ಮಾತನಾಡಿದ ಅಂತರ್ಜಲ ಮಟ್ಟದಲ್ಲಿ ಲಭ್ಯವಿರುವ ನೀರು ಮಲಿನವಾಗಿದೆ. ನೀರಿನ ಕೊರೆತೆ ಇರುವ ಕಾರಣ ನೀರಿನ ಶುಧ್ದಿಕರಿಸುವ ಘಟಕವನ್ನು ನಿರ್ಮಾಣ ಮಾಡಬೇಕು ಹಾಗೂ ಎರಡು ಬೈ ಪಾಸ್ ರಸ್ತೆ ಹಾಗೂ ಒಂದು ರಿಂಗ್ ರೋಡ್ ನಿರ್ಮಾಣವಾಗಬೇಕು ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಆಗಬೇಕು ಎಂದು ತಿಳಿಸಿದರು.

ಮಂಡ್ಯ ಲೋಕಸಭಾ ಸದಸ್ಯರಾದ ಸಿ.ಎಸ್.ಪುಟ್ಟರಾಜು ಅವರು ಮಾತನಾಡಿ ರಿಂಗ್ ರೋಡ್ ನಿರ್ಮಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಂಡ್ಯ ಜಿಲ್ಲೆಯಲ್ಲಿ ಅನೇಕ ಪ್ರವಾಸ ತಾಣಗಳಿದ್ದು, ಪ್ರವಾಸಿಗರಿಗೆ ಮೂಲಸೌಕರ್ಯ ಕೊರತೆಯಾಗದಂತೆ ಕ್ರಮವಹಿಸಬೇಕು. ಕಲಾಮಂದಿರ ಸೇರಿದಂತೆ ಬಯಲು ರಂಗ ಮಂದಿಗಳು ಸಾಂಸ್ಕೃತಿಕ ಕೇಂದ್ರಗಳು ಹೆಚ್ಚು ಸ್ಥಾಪನೆಯಾಗಬೇಕಿದೆ ಎಂದು ತಿಳಿಸಿದರು.

ರೈತರ ಅಭಿವೃದ್ಧಿ ಕೈಗೊಳ್ಳುವ ಕ್ರಮಗಳಿಗೆ ಮುಕ್ತವಾಗಿ ಸ್ವಾಗತಿಸಲಾಗುವುದು. ರೈತರಿ ಅನುಕೂಲವಾಗುವ ರೈತ ಸ್ನೇಹಿ, ಜನ ಸ್ನೇಹಿ, ಪರಿಸರ ಸ್ನೇಹಿ ಕೈಗಾರಿಕೆಗಳು ಹೆಚ್ಚು ನಿರ್ಮಾಣವಾಗಬೇಕು. ಇದರಿಂದ ಉದ್ಯೋಗದ ಕೊರತೆಯನ್ನು ನೀಗಿಸಬಹುದು. ಒಟ್ಟಿನಲ್ಲಿ ಮಂಡ್ಯ ಜಿಲ್ಲೆ ಸರ್ವಾಂಗೀಣಾ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.

ಸಭೆಯಲ್ಲಿ ಮಾಜಿ ಶಾಸಕರಾದ ಹೆ.ಬಿ.ಚೌಡಯ್ಯ, ಮುಡಾ ಅಧ್ಯಕ್ಷರಾದ ಮುನಾವರ್ ಖಾನ್, ಮಂಡ್ಯ ನಗರಸಭೆ ಅಧ್ಯಕ್ಷರಾದ ಬೋರೆಗೌಡ, ಧರ್ಮಧರ್ಶಿ ಭಾನುಪ್ರಕಾಶ್ ಶರ್ಮ, ಮೀರಾ ಶಿವಲಿಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಶರತ್, ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಹಾಗೂ ಇತರೆ ಗಣ್ಯರು ಭಾಗವಹಿಸಿದ್ದರು.

(ಎನ್‍ಬಿಎನ್‍)

Leave a Reply

comments

Related Articles

error: