ಮೈಸೂರು

ಮಹಾನಗರಪಾಲಿಕೆಯ ಮೇಯರ್ ಎಂ.ಜೆ.ರವಿಕುಮಾರ್ ನಗರ ಪ್ರದಕ್ಷಿಣೆ : ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಖಡಕ್ ಸೂಚನೆ

ಮೈಸೂರು,ಅ.13:-  ಗುರುವಾರ ರಾತ್ರಿ ಸುರಿದ ಭಾರೀ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಮಹಾನಗರಪಾಲಿಕೆಯ ಮೇಯರ್ ಎಂ.ಜೆ.ರವಿಕುಮಾರ್ ಶುಕ್ರವಾರ ಬೆಳಿಗ್ಗೆ ನಗರ ಪ್ರದಕ್ಷಿಣೆ ಕೈಗೊಂಡಿದ್ದರು.

ಗುರುವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ಎಲ್ಲೆಲ್ಲಿ ಏನೇನು ಅನಾಹುತಗಳು ಸಂಭವಿಸಿವೆ ಎಂಬುದನ್ನು ವೀಕ್ಷಿಸಲು ಮನಪಾ ಮೇಯರ್ ನಗರ ಪ್ರದಕ್ಷಿಣೆ ಕೈಗೊಂಡಿದ್ದರು. ಪಾಲಿಕೆಯಿಂದ ಹೊರಟ ಮೇಯರ್ ಅವರು ಹಾರ್ಡಿಂಜ್ ಸರ್ಕಲ್, ಕೆ.ಎಸ್.ಆರ್.ಟಿ.ಸಿ.ಬಸ್ ಸ್ಟ್ಯಾಂಡ್, ರೈಲ್ವೇ ಸ್ಟೇಶನ್, ಒಂಟಿಕೊಪ್ಪಲ್ ಪೊಲೀಸ್ ಸ್ಟೇಶನ್, ಚಂದ್ರಕಲಾ ಹಾಸ್ಪಿಟಲ್ ಜಂಕ್ಷನ್, ವಿದ್ಯಾವರ್ಧಕ ಕಾಲೇಜ್, ಹುಣಸೂರು ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ನ್ಯೂಕಾಂತರಾಜ್ ಅರಸ್ ರಸ್ತೆ, ಆರ್.ಟಿಓ ವೃತ್ತ, ಗನ್ ಹೌಸ್, ಝೂ ರಸ್ತೆ, ಪಿ.ಡಬ್ಲ್ಯು ಡಿ ಫೀಸ್ ನಿಂದ ಆರ್ಕ್ ಗೇಟ್ ವರೆಗೆ ತೆರಳಿ  ರಸ್ತೆಗಳನ್ನು ವೀಕ್ಷಿಸಿದರು. ರಸ್ತೆಗಳಲ್ಲಿ ಹೊಂಡ ಗುಂಡಿಗಳು ಬಿದ್ದಿದ್ದು, ಕೂಡಲೇ ಅವುಗಳನ್ನು ದುರಸ್ತಿಗೊಳಿಸುವ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.  ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಸ್ತೆಗಳಲ್ಲಿ ಸಾಕಷ್ಟು ಹೊಂಡಗುಂಡಿಗಳು ಬಿದ್ದಿವೆ. ಹೊಂಡಗಳಿಂದ ವಾಹನ ಸವಾರರಿಗೆ ಅಪಾಯಗಳಾಗುವ ಸಾಧ್ಯತೆ ಇದ್ದು ಆದಷ್ಟು ಬೇಗ ಹೊಂಡಗಳನ್ನು ಮುಂಚಿ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು. ಅತಿ ಶೀಘ್ರದಲ್ಲಿಯೇ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಈ ಸಂದರ್ಭ ಪಾಲಿಕೆ ಪಾಲಿಕೆಯ ಪ್ರಬಾರ ಯುಕ್ತ ಸುರೇಶ್ ಬಾಬು, ನಗರಪಾಲಿಕೆ ಸದಸ್ಯ ಪುರುಷೋತ್ತಮ್ ಹಾಗೂ ಅಧಿಕಾರಿಗಳು ಮೇಯರ್ ಜೊತೆ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: