ಕರ್ನಾಟಕಪ್ರಮುಖ ಸುದ್ದಿ

ಹಾಸನಾಂಬೆಯ ದರ್ಶನ ಪಡೆದ ಹೆಚ್.ಡಿ ದೇವೇಗೌಡ ಮತ್ತು ಕುಟುಂಬ

ರಾಜ್ಯ(ಹಾಸನ)ಅ.13:- ಮಾಜಿ ಪ್ರಧಾನಿ ಹೆಚ್.ಡಿ  ದೇವೇಗೌಡ ಮತ್ತು ಕುಟುಂಬಿಕರು ಹಾಸನಾಂಬೆಯ ದರ್ಶನವನ್ನು ಪಡೆದರು.

ವರ್ಷಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ಗುರುವಾರ ತೆರೆದುಕೊಂಡಿದ್ದು,ಅಧಿದೇವತೆ ಹಾಸನಾಂಬೆಯ ದರ್ಶನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪತ್ನಿ ಚನ್ನಮ್ಮ, ಪುತ್ರ  ರೇವಣ್ಣ , ಸೊಸೆ ಭವಾನಿ ರೇವಣ್ಣ ಸೇರಿದಂತೆ ಕುಟುಂಬ ಸಮೇತ ಬಂದು ದರ್ಶನ ಪಡೆದರು. ಹಾಸನಾಂಬೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರತಿವರ್ಷವೂ  ಹಾಸನಾಂಬೆ ದರ್ಶನ ಪಡೆಯುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: