ಪ್ರಮುಖ ಸುದ್ದಿ

ಶೈಕ್ಷಣಿಕವಾಗಿ, ರಾಜಕೀಯವಾಗಿ ಸಬಲರಾದಾಗ ಅಭಿವೃದ್ಧಿ ಸಾಧ್ಯ: ಹರಿಹರಾನಂದ

ಪ್ರಮುಖ ಸುದ್ದಿ, ಹುಣಸೂರು. ಅ.೧೩: ನಿರ್ಗತಿಕರು ಹಾಗೂ ಬಡವರು, ದಲಿತರು ಶೈಕ್ಷಣೆಕವಾಗಿ, ರಾಜಕೀಯ ಹಾಗೂ ಧಾರ್ಮಿಕವಾಗಿ ಸಬಲರಾದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ದಸಂಸ ರಾಜ್ಯ ಸಂಚಾಲಕ ಹರಿಹರಾನಂದ ಸ್ವಾಮಿ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಸಂಯಮ ಪ್ರಶಸ್ತಿ ಪಡೆದ ನಿಂಗರಾಜ್ ಮಾಲ್ಲಾಡಿಯವರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಅವರು ಕೆಳ ಶ್ರೇಣಿ ಸಮಾಜವನ್ನು ಮೇಲ್ ಶ್ರೇಣೆ ಸಮಾಜ ಒಪ್ಪುವುದಿಲ್ಲ. ಈ ಪ್ರಶಸ್ತಿ ಪಡೆಯುವುದು ಸುಲಭದ ವಿಚಾರವಲ್ಲ. ಇದರ ಹಿಂದೆ ಅವರ ಶ್ರಮ ಹೆಚ್ಚಾಗಿದೆ. ನಿಂಗರಾಜ್ ಮಾಲ್ಲಾಡಿಯವರು ಬಡವರ ಕಷ್ಟಗಳಿಗೆ ಸ್ಪಂದಿಸಿದ್ದರಿಂದ ಇಂತಹ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.
ಕನ್ನಡ ಸಾಹಿತ್ಯಪರಿಷತ್ ಮಾಜಿ ಅಧಕ್ಷ ವಿ.ಪಿ.ಸಾಯಿನಾಥ್ ಮಾತನಾಡಿ ನಾನು ಏನು ತಪ್ಪು ಮಾಡಿಲ್ಲವಾದರು ನನಗೆ ದಲಿತರಿಂದ ೨ಬಾರಿ ಜಾತಿ ನಿಂದನೆ ದೂರು ದಾಖಲಾಗಿದೆ. ಜನ ಜಾಗೃತಿ ವೇದಿಕೆಯಿಂದ ನ್ಯಾಯ ದೊರಕಿಸಬೇಕು ಎಂದು ಮನವಿ ಮಾಡಿದ ಅವರು. ವೇದಿಕೆ ಅಧಕ್ಷರು ಹಾಗೂ ಕಾರ್ಯದರ್ಶಿಗೆ ಮನಸಿಕವಾಗಿ ಧೈರ್ಯ ತಂಬಿ ನಾವು ನಿಮ್ಮೊಂದಿಗೆ ಇzವೆ ನೀವು ಹೆದರಬೇಕಾಗಿಲ್ಲ ಎಂದರು.
ಕಾರ್ಯಕ್ರಮದಲ್ಲಿ ದಲಿತ ಮಖಂಡರಾದ ದೇವೆಂದ್ರ, ಗಜೇಂದ್ರ, ವಸಂತಮ್ಮ, ಮಾಜಿ ಪುರಸಭೆ ಅಧ್ಯಕ್ಷ ರಮೇಶ್ ಕಲ್ಕುಣಿಕೆ, ತಟ್ಟೆಕೆರೆ ಕೃಷ್ಣ, ವಾಸುರಾಜ್, ಕೆಂಪರಾಜು, ಲಕ್ಷ್ಮಮ್ಮ, ಬಸಮ್ಮ, ಮಾಲೇಗೌಡ, ಶೇಖರ್, ವಸಂತಗೋಪಾಲ, ವಾಸೇಗೌಡ, ನಸುರುಲ್ಲಾಖಾನ್, ಹರೀಶ್, ನಾಗರಾಜು, ಕೃಷ್ಣಬೋವಿ, ಸ್ವಾಮಿಗೌಡ, ಶಿವಣ್ಣ, ಪುಟ್ಟರಾಜು, ಗೌರಮ್ಮ ಮಲ್ಲಾಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

 

Leave a Reply

comments

Related Articles

error: