ಪ್ರಮುಖ ಸುದ್ದಿ

ಯುವಕನ ಕೊಲೆ: ಪ್ರಿಯತಮೆ ಸೇರಿ ಓರ್ವನ ಬಂಧನ

ಪ್ರಮುಖ ಸುದ್ದಿ, ಹುಣಸೂರು, ಅ.೧೩: ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನೇಣು ಬಿಗಿದು ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಾಗಮಣಿ, ಸುರೇಶ ಬಂಧಿತ ಆರೋಪಿಗಳು. ಚಿಕ್ಕಹುಣಸೂರು ನಿವಾಸಿ ವೈರಮುಡಿ ಎಂಬುವರ ಪುತ್ರ ಗಿರೀಶನನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಕಳೆದ ೧೩ ವರ್ಷಗಳ ಹಿಂದೆ ಸಿರಿಯೂರಿನ ನಾಗಮಣಿಯನ್ನು ಮೈಸೂರು ತಾಲೂಕಿನ ಹೂಟಗಳ್ಳಿಯ ಮಹದೇವನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ಮಧ್ಯೆ ಗಿರೀಶನೊಂದಿಗೆ ಸ್ನೇಹ ಬೆಳೆದು ಪತಿ ತೊರೆದ ನಾಗಮಣಿ ಗಿರೀಶನೊಂದಿಗೆ ೧೦ ವರ್ಷಗಳಿಂದ ಚಿಕ್ಕಹುಣಸೂರು ಹೇಳೇ ಊರಿನಲ್ಲಿ ವಾಸವಾಗಿದ್ದಳು.
ಅಲಿಯಾಸ್ ಸುದೇಶ ಬಂದಿತರು. ನಾಗಮಣಿ ಕೂಲಿಗೆ ತೆರಳುತ್ತಿದ್ದ ಗಿರೀಶನ ಸ್ನೇಹಿತ ಸುರೇಶನೊಂದಿಗೂ ಅಕ್ರಮ ಸಂಬಂಧ ವಿರಿಸಿಕೊಂಡಿದ್ದಳು. ಇದು ಗಿರೀಶನಿಗೆ ಗೊತ್ತಾಗಿ ಜಗಳವಾಗುತ್ತಿತ್ತು. ಕುಡಿತಕ್ಕೆ ದಾಸನಾಗಿದ್ದ ಗಿರೀಶನನ್ನು ಮುಗಿಸಿದಲ್ಲಿ ಇಬ್ಬರೂ ಚೆನ್ನಾಗಿರಬಹುದೆಂದು ನಾಗಮಣಿ ಮತ್ತು ಸುರೇಶ್ ಸಂಚು ರೂಪಿಸಿದ್ದರು. ಗಿರೀಶನಿಗೆ ಕಂಠಪೂರ್ತಿ ಕುಡಿಸಿ ಹತ್ಯೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. (ವರದಿ ಬಿ.ಎಂ)

 

Leave a Reply

comments

Related Articles

error: