
ಕರ್ನಾಟಕಪ್ರಮುಖ ಸುದ್ದಿ
ಕೆ.ಸಿ.ವೇಣುಗೋಪಾಲ್ ವಿರುದ್ಧ ಅತ್ಯಾಚಾರ ಆರೋಪ : ಕರ್ನಾಟಕದಿಂದ ವಾಪಸ್ಸು ಕಳಿಹಿಸುವಂತೆ ಆಗ್ರಹಿಸಿ ಪ್ರತಿಭಟನೆ
ರಾಜ್ಯ(ಬೆಂಗಳೂರು)ಅ.13:- ಕೇರಳದ ಸೋಲಾರ್ ಹಗರಣ ಪ್ರಕರಣ ಸಂಬಂಧ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿರುವ ಹಿನ್ನೆಲೆ ಅವರನ್ನು ಹಿಂದಕ್ಕೆ ಕರೆಸುವಂತೆ ಆಗ್ರಹಿಸಿ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿ ಮುಂಭಾಗ ಹೋರಾಟ ನಡೆಸುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ನಗರದಲ್ಲಿಂದು ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಮಹಿಳಾ ಮೋರ್ಚಾ(ಬೆಂಗಳೂರು)ವತಿಯಿಂದ ಕೇರಳದಲ್ಲಿ ಲೈಂಗಿಕ ಕಿರುಕುಳ ಹಾಗೂ ಸೋಲಾರ್ ಹಗರಣದಲ್ಲಿ ಭಾಗಿಯಾಗಿದ್ದ ವೇಣುಗೋಪಾಲ್ ಅನ್ನು ಕರ್ನಾಟಕದಿಂದ ವಾಪಸ್ಸು ಕಳಿಹಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಶೋಭಾ ಕರಂದ್ಲಾಜೆ, ಕೇರಳದಲ್ಲಿ 2003ರಲ್ಲಿ ನಡೆದಿದ್ದ ಬಹು ಕೋಟಿ ಸೋಲಾರ್ ಹಗರಣದ ವೇಳೆ ಲೈಂಗಿಕ ಕಿರುಕುಳಕ್ಕೆ ಆರೋಪಿ ಸವಿತಾ ನಾಯರ್ ಒಳಗಾಗಿದ್ದರು ಎಂದು ಆರೋಪಿಸಿದರು. ವೇಣುಗೋಪಾಲ್ ರಿಂದ ಅತ್ಯಾಚಾರಕ್ಕೆ ಒಳಗಾದ ಸವಿತಾ ನಾಯರ್. ಹಲವು ರಾಜಕಾರಣಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಿದರು ಮಹಿಳೆಗೆ ನ್ಯಾಯ ಸಿಕ್ಕಿಲ್ಲ. ಆದರೆ, ಇದೀಗ ಪ್ರಕರಣ ಬೆಳಕಿಗೆ ಬಂದಿದ್ದು, ವೇಣು ಗೋಪಾಲ್ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು. ನಮ್ಮ ರಾಜ್ಯಕ್ಕೆ ಬರುವ ಯೋಗ್ಯತೆ ಅವರಿಗಿಲ್ಲ. ಕಾಂಗ್ರೆಸ್ ರೆಪಿಷ್ಟ್ ಗಳು ನಮ್ಮ ರಾಜ್ಯಕ್ಕೆ ಬರುವ ಅಗತ್ಯವಿಲ್ಲ. ವೇಣುಗೋಪಾಲ್ ಎಲ್ಲೆಲ್ಲಿ ಸಭೆ ನಡೆಸುತ್ತಾರೋ ಅಲ್ಲೆಲ್ಲಾ ಬಿಜೆಪಿ ಕಪ್ಪು ಬಾವುಟ ಹಾರಿಸಿ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಸಚಿವರ ಮೇಲೆ ಆರೋಪ ಬಂದರೆ ಕ್ಲಿನ್ ಚಿಟ್ ಕೊಡಿಸಲು ಸಿಐಡಿ ಇಟ್ಟುಕೊಂಡಿದ್ದಾರೆ. ಮಾಜಿ ಸಚಿವ ಹೆಚ್.ವೈ. ಮೇಟಿ ನಿರಂತರ ಲೈಂಗಿಕ ದೌರ್ಜನ್ಯ ಮಾಡಿದ್ದಾರೆಂದು ಆರೋಪ ಮಾಡಿದ್ದರು ಕ್ಲಿನ್ ಚಿಟ್ ಕೊಡಿಸಿದರು. ಅದೇರೀತಿ, ಸಚಿವ ಕೆ.ಜೆ. ಜಾರ್ಜ್ ಮೇಲೆ ಕೊಲೆ ಆರೋಪ ಬಂತು ಅದು ಕ್ಲಿನ್ ಚಿಟ್ ಕೊಡಿಸಿದರು. ಪರಮೇಶ್ವರ್ ನಾಯ್ಕ್ ಕಿರುಕುಳ ದಿಂದ ಅನುಪಮಾ ಶೆಣೈ ರಾಜೀನಾಮೆ ಕೊಟ್ಟರು. ಅಲ್ಲದೆ, ಸಿಎಂ ಸಿದ್ದರಾಮಯ್ಯ, ಕೆಂಪಯ್ಯ ನೇತೃತ್ವದಲ್ಲಿ ಮಹಿಳೆಯರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ವೇಣುಗೋಪಾಲ್ ತೊಲಗಲಿ ಎಂದು ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ರಾಜ್ಯ ಮಹಿಳಾ ಮೋರ್ಚ ಆಧ್ಯಕ್ಷೆ ಭಾರತಿ ಸೇರಿದಂತೆ ಮಹಿಳಾ ಮೋರ್ಚ ನಗರ ಘಟಕದ ಸದಸ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)